Skip to main content


ಯಶ್ ಗಡ್ಡಕ್ಕೆ ಕತ್ತರಿ ಹಾಕಲು ಮುಹೂರ್ತ ಫಿಕ್ಸ್!

ತಮ್ಮ ನೆಚ್ಚಿನ ನಟನ ಜೀವನ ಶೈಲಿಯಲ್ಲಿ ಬದಲಾವಣೆಯಾದ್ರೆ ಪ್ರತಿಯೊಬ್ಬ ಅಭಿಮಾನಿ ಕೂಡ ಯಾಕೆ, ಏನು ಅಂತಾ ಕೇಳ್ತಾನೆ ಇರ್ತಾರೆ. ಅದರಲ್ಲೂ ಲುಕ್ ಚೇಂಜ್ ಮಾಡಿರೋದು ಸಿನಿಮಾಗೆ ಅಂದ್ರೂ ಕೂಡ ಅಭಿಮಾನಿಗಳಿಗೆ ಇಷ್ಟವಾಗದಿದ್ದಲ್ಲಿ ಅವರು ಮೊದಲು ಚೇಂಜ್ ಮಾಡ್ಕೊಳ್ಳಿ ಅಂತಾರೆ. ಇದಿಗ ಯಶ್‌ದು ಅದೇ ಕಥೆ. ಕೆಜಿಎಫ್ ಸಿನಿಮಾಗೆ ಅಂತಾ ಯಶ್ ಗಡ್ಡ ಬಿಟ್ಟಿದ್ರು. ಆದ್ರೆ ಅದನ್ನ ಯಾವಾಗ ತೆಗಿಸ್ತಾರೆ ಎಂಬ ಪ್ರಶ್ನೆಯು ಪ್ರತಿ ಬಾರಿ ಅಭಿಮಾನಿಗಳ ಮುಂದೆ ಬಂದಾಗ ಮೊದಲ ಪ್ರಶ್ನೆಯೇ ಆಗಿರುತ್ತಿತ್ತು. ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಕೆಜಿಎಫ್ ಸಿನಿಮಾ ಚಿತ್ರೀಕರಣ ಇನ್ನು ೧೦ ದಿನಗಳು ಮಾತ್ರ ಬಾಕಿ ಇದೆ. ಚಿತ್ರೀಕರಣ ಮುಗಿಸಿದ ತಕ್ಷಣ ಶೇವ್ ಮಾಡುತ್ತೇನೆ ಎಂದಿದ್ದಾರೆ ಯಶ್. ಇನ್ನು ಹತ್ತು ದಿನಗಳ ನಂತರ ತಮ್ಮ ಹಳೆ ಲುಕ್ ಗೆ ಮರಳಲಿದ್ದಾರೆ ರಾಕಿಂಗ್ ಸ್ಟಾರ್.

short by Pawan / read more at Balkani News

Comments