Skip to main content


ಸೂರ್ಯನ ಬೆಳಕಿನಿಂದ ಹೈಡ್ರೋಜನ್ ಇಂಧನ ಉತ್ಪಾದನೆ: ವಿಜ್ಞಾನಿಗಳ ಆವಿಷ್ಕಾರ

ಸಂಶೋಧಕರು ಸೂರ್ಯನ ಬೆಳಕಿನಿಂದ ಹೈಡ್ರೋಜನ್ ಇಂಧನ ಉತ್ಪಾದನೆ ಮಾಡುವ ವಿಧಾನವನ್ನು ಕಂಡುಹಿಡಿದ್ದಿದ್ದಾರೆ. ಬ್ರಿಟನ್ ನಲ್ಲಿರುವ ಭಾರತೀಯ ಮೂಲದ ಸಂಶೋಧಕ ಗೊವಿಂದರ್ ಸಿಂಗ್ ಪವಾರ್ ಸೋಲಾರ್ ಇಂಧನಕ್ಕೆ ಆಶಾಕಿರಣವಾಗಬಲ್ಲ ಸಂಶೋಧನೆಯೊಂದನ್ನು ಮಾಡಿದ್ದಾರೆ.

ಸೂರ್ಯನ ಬೆಳಕನ್ನು ಬಳಸಿಕೊಂಡು ನೀರಿನಲ್ಲಿರುವ ಹೈಡ್ರೋಜನ್ ಹಾಗೂ ಆಕ್ಸಿಜನ್ ಅಂಶಗಳನ್ನು ವಿಭಜನೆ ಮಾಡುವ ವಿಧಾನವನ್ನು ಸಂಶೋಧಕರು ಕಂಡುಕೊಂಡಿದ್ದು, ಹೀಗೆ ಬೇರ್ಪಟ್ಟ ಹೈಡ್ರೋಜನ್ ನ್ನು ವಾಹನ ಹಾಗೂ ಮನೆಗಳಿಗೆ ದಿನನಿತ್ಯದ ಬಳಕೆಯ ಇಂಧನವನ್ನಾಗಿ ಬಳಕೆ ಮಾಡಬಹುದೆಂದು ಸೈಂಟಿಫಿಕ್ ರಿಪೋಟ್ಸ್ ಜರ್ನಲ್ ನಲ್ಲಿ ಪ್ರಕಟಗೊಂಡಿರುವ ಸಂಶೋಧನಾ ವರದಿಯಲ್ಲಿ ತಿಳಿಸಲಾಗಿದೆ.

short by: Sp / more ar DailyHunt

Comments