Skip to main content


"ಕೋಟಿಗೊಬ್ಬ-3" ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ, ಸೂರಪ್ಪ ಬಾಬು ನಿರ್ಮಾಣದ 'ಕೋಟಿಗೊಬ್ಬ -3' ಚಿತ್ರೀಕರಣ ಆರಂಭವಾಗಿದೆ. 'ಕೋಟಿಗೊಬ್ಬ -2' ಬಳಿಕ ಸೂರಪ್ಪ ಬಾಬು ಮತ್ತು ಸುದೀಪ್ ಒಂದಾಗಿದ್ದು, ಶಿವಕಾರ್ತಿಕ್ ನಿರ್ದೇಶನದಲ್ಲಿ 'ಕೋಟಿಗೊಬ್ಬ -3' ಮೂಡಿ ಬರಲಿದೆ. ಕಳೆದ ಮಾರ್ಚ್ ನಲ್ಲೇ ಚಿತ್ರದ ಮುಹೂರ್ತ ನೆರವೇರಿದ್ದು, ಇನ್ನೂ ಪಾತ್ರ ವರ್ಗದ ಆಯ್ಕೆ ನಡೆದಿದೆ. ಡಿಸೆಂಬರ್ ನಲ್ಲಿ ಚಿತ್ರವನ್ನು ತೆರೆಗೆ ತರಲು ಪ್ಲಾನ್ ಮಾಡಲಾಗಿದ್ದು, ಅದಕ್ಕೆ ಪೂರಕವಾಗಿ ಶೂಟಿಂಗ್ ಶುರು ಮಾಡಲಾಗಿದೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. 'ದಿ ವಿಲನ್', 'ಅಂಬಿ ನಿಂಗ್ ವಯಸ್ಸಾಯ್ತೊ' ಚಿತ್ರಗಳಲ್ಲಿ ಬ್ಯುಸಿಯಾಗಿರುವ ಸುದೀಪ್, ಇದರೊಂದಿಗೆ 'ಪೈಲ್ವಾನ್' ಚಿತ್ರಕ್ಕೂ ತಯಾರಿ ನಡೆಸಿದ್ದಾರೆ.     

short by Pawan / more at Kannadadunia

Comments