Skip to main content


ಅಂಬೇಡ್ಕರ್‌ರನ್ನು ರಾಜಕೀಯಕ್ಕೆ ಎಳೆದು ತರಬೇಡಿ: ಕಾಂಗ್ರೆಸ್‌ಗೆ ಮೋದಿ

"ನನ್ನ ಸರಕಾರ ಡಾ. ಬಿ ಆರ್‌ ಅಂಬೇಡ್ಕರ್‌ಗೆ ನೀಡಿದಷ್ಟು ಗೌರವ ಮತ್ತು ಮಹತ್ವವನ್ನು ಬೇರೆ ಯಾವ ಸರಕಾರವೂ ಈ ತನಕ ನೀಡಿಲ್ಲ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದಲಿತ ಸಮೂಹಗಳ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಇಂದಿಲ್ಲಿ  ಹೇಳಿದರು. ಕಾಂಗ್ರೆಸ್‌ಗೆ ನೇರ ಟಾಂಗ್‌ ನೀಡಿದ ಪ್ರಧಾನಿ ಮೋದಿ "ಅಂಬೇಡ್ಕರ್‌ ಅವರನ್ನು ರಾಜಕೀಯಕ್ಕೆ ಎಳೆದು ತರಬೇಡಿ' ಎಂದು ಹೇಳಿದರು. "ನಾವು ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ತೋರಿಸಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿದ್ದೇವೆ. ಡಾ. ಅಂಬೇಡ್ಕರ್‌ ಸಾರಿದ ಮೂಲ ತತ್ವಗಳಲ್ಲಿ ಸಾಮರಸ್ಯ ಮತ್ತು ಏಕತೆ ಮುಖ್ಯವಾಗಿವೆ. ಬಡವರಲ್ಲಿ ಬಡವರಿಗಾಗಿ ಕೆಲಸ ಮಾಡುವುದೇ ನಮ್ಮ ಧ್ಯೇಯವಾಗಿದೆ' ಎಂದು ಪ್ರಧಾನಿ ಮೋದಿ ಅವರು ಇಲ್ಲಿನ "ವೆಸ್ಟರ್ನ ಕೋರ್ಟ್‌'ಗೆ ತಾಗಿಕೊಂಡಿರುವ ನೂತನ ಕಟ್ಟಡವನ್ನು ಉದ್ಘಾಟಿಸಿ ಹೇಳಿದರು.        

short by NP / read more at Udayavani

Comments