Skip to main content


ಬಾಕಿ ವಸೂಲಿಗಾಗಿ ಕೋರ್ಟ್ ಮೆಟ್ಟಿಲೇರಿದ ಧೋನಿ

150 ಕೋಟಿ ರೂಪಾಯಿ ಬಾಕಿ ಪಾವತಿ ಮಾಡದ ರಿಯಲ್ ಎಸ್ಟೇಟ್ ಕಂಪನಿ ಆಮ್ರಪಾಲಿ ಗ್ರೂಪ್ ವಿರುದ್ಧ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೇಸ್ ದಾಖಲಿಸಿದ್ದಾರೆ. ಧೋನಿ ಆಮ್ರಪಾಲಿ ಗ್ರೂಪ್ ನ ಬ್ರಾಂಡ್ ಅಂಬಾಸಿಡರ್ ಆಗಿದ್ದು, ಒಪ್ಪಂದದಂತೆ ಅವರಿಗೆ ಹಣ ಪಾವತಿಸಿಲ್ಲ.

ಹಲವು ನಗರಗಳಲ್ಲಿ ಕಂಪನಿಯ ಹೌಸಿಂಗ್ ಪ್ರಾಜೆಕ್ಟ್ ಗಳು ಕೂಡ ಅರ್ಧಕ್ಕೆ ನಿಂತಿವೆ. ಕಂಪನಿ ಆರ್ಥಿಕ ಸಂಕಷ್ಟದಲ್ಲಿದೆ ಅಂತಾ ಹೇಳಲಾಗುತ್ತಿದೆ. ಧೋನಿ, ಕೆಎಲ್ ರಾಹುಲ್, ಭುವನೇಶ್ವರ್ ಕುಮಾರ್, ಡುಪ್ಲೆಸಿಸ್ ಸೇರಿದಂತೆ ಹಲವು ಕ್ರಿಕೆಟಿಗರ ಜಾಹೀರಾತು ಒಪ್ಪಂದಗಳನ್ನು ನೋಡಿಕೊಳ್ತಿರೋ ರಿತಿ ಸ್ಪೋರ್ಟ್ಸ್, ದೆಹಲಿ ಹೈಕೋರ್ಟ್ ನಲ್ಲಿ ಆಮ್ರಪಾಲಿ ವಿರುದ್ಧ ಕೇಸ್ ಜಡಿದಿದೆ.

ಕಳೆದ 6-7 ವರ್ಷಗಳಿಂದ ಧೋನಿ, ಆಮ್ರಪಾಲಿ ಗ್ರೂಪ್ ನ ಬ್ರಾಂಡ್ ಅಂಬಾಸಿಡರ್ ಆಗಿದ್ದರು.

short by: Nithin / read more at Kannadadunia

Comments