Skip to main content


ಬ್ರೇಕಿಂಗ್: ಕಾಮನ್‌ವೆಲ್ತ್‌ ಗೇಮ್ಸ್‌, ಚಿನ್ನ ಗೆದ್ದ ಸುಶೀಲ್‌ ಕುಮಾರ್‌

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ 21ನೇ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭರವಸೆಯ ಕುಸ್ತಿಪಟು ಸುಶೀಲ್‌ ಕುಮಾರ್‌ ಸ್ವರ್ಣ ಪದಕಕ್ಕೆ ಮುತ್ತಿಕ್ಕಿದ್ದಾರೆ. 74 ಕೆಜಿ ವಿಭಾಗದಲ್ಲಿ ನಡೆದ ಫೈನಲ್‌ ಕುಸ್ತಿಯಲ್ಲಿ ಸುಶೀಲ್‌ ಕುಮಾರ್‌ ದಕ್ಷಿಣ ಆಫ್ರಿಕಾದ ಕುಸ್ತಿಪಟುವಿನ ವಿರುದ್ಧ ಗೆಲುವು ಸಾಧಿಸಿದ್ದಾರೆ. ಇದಕ್ಕೂ ಮೊದಲು 57ಕೆಜಿ ವಿಭಾಗದ ಕುಸ್ತಿಯಲ್ಲಿ ರಾಹುಲ್‌ ಅವಾರಿ ಚಿನ್ನವನ್ನು ತಮ್ಮದಾಗಿಸಿಕೊಂಡಿದ್ದಾರೆ. 76 ಕೆಜಿ ಕುಸ್ತಿ ವಿಭಾಗದಲ್ಲಿ ಭಾರತದ ಕಿರಣ್ ಕಂಚಿನ ಪದಕ ಗೆಲುವಲ್ಲಿ ಯಶಸ್ವಿಯಾಗಿದ್ದಾರೆ.53 ಕೆಜಿ ವಿಭಾಗದಲ್ಲಿ ಬಬಿತಾ ಕುಮಾರಿ ಬೆಳ್ಳಿಗೆ ಕೊರಳೊಡ್ಡಿದ್ದಾರೆ. ಇದರೊಂದಿಗೆ ಭಾರತ 8ನೇ ದಿನ 14 ಚಿನ್ನ, ಆರು ಬೆಳ್ಳಿ ಹಾಗೂ 9 ಕಂಚಿನ ಪದಕ ಗೆಲ್ಲುವುದರ ಮೂಲಕ 3ನೇ ಸ್ಥಾನದಲ್ಲಿದೆ.

short by: Nithin / read more at Kannadanewsnow