Skip to main content


ಟೆನಿಸ್‌: ಎರಡನೇ ಸುತ್ತಿಗೆ ಜೊಕೊವಿಚ್‌

ದಿಟ್ಟ ಆಟ ಆಡಿದ ಸರ್ಬಿಯಾದ ನೊವಾಕ್‌ ಜೊಕೊವಿಚ್‌, ಎಟಿಪಿ ಮಾಂಟೆ ಕಾರ್ಲೊ ಮಾಸ್ಟರ್ಸ್‌ ಟೆನಿಸ್‌ ಟೂರ್ನಿಯಲ್ಲಿ ಎರಡನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಸೋಮವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಆರಂಭಿಕ ಸುತ್ತಿನ ಹಣಾಹಣಿಯಲ್ಲಿ ನೊವಾಕ್‌ 6–0, 6–1ರ ನೇರ ಸೆಟ್‌ಗಳಿಂದ ಸರ್ಬಿಯಾದವರೇ ಆದ ದುಸಾನ್‌ ಲಾಜೊವಿಚ್‌ ಅವರನ್ನು ಸೋಲಿಸಿದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ ಒಂಬತ್ತನೆ ಸ್ಥಾನ ಹೊಂದಿರುವ ನೊವಾಕ್‌ ಎರಡೂ ಸೆಟ್‌ಗಳಲ್ಲಿ ಪ್ರಾಬಲ್ಯ ಮೆರೆದರು. ಕೆನಡಾದ ಮಿಲೊಸ್‌ ರಾವನಿಕ್‌ 3–6, 6–2, 6–3ರಲ್ಲಿ ಲುಕಾಸ್‌ ಕ್ಯಾಟರಿನಾ ಅವರನ್ನು ಮಣಿಸಿದರು.            

short by Prajwal / read more at Prajavani

Comments