Skip to main content


ವೋಗ್ ಮ್ಯಾಗಜಿನ್ ಕವರ್ ಫೋಟೋಗೆ ಅಮೆರಿಕ ನಟನ ಜೊತೆ ಹಾಟ್ ಲುಕ್ ಕೊಟ್ಟ ಐಶ್ವರ್ಯ ರೈ

ವೋಗ್‌ ಮ್ಯಾಗಜಿನ್‌ ಕವರ್ ಫೋಟೋಗೆ ಅಮೆರಿಕದ ನಟ ಹಾಗೂ ಗಾಯಕ ಫಾರೆಲ್ ವಿಲಿಯಮ್ಸ್ ಜೊತೆ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಪೋಸ್ ಕೊಟ್ಟಿದ್ದಾರೆ. ಏಪ್ರಿಲ್ ಸಂಚಿಕೆಯ ಮ್ಯಾಗಜಿನ್‌‌ನಲ್ಲಿ ಈ ಕವರ್ ಫೋಟೋ ಪ್ರಿಂಟ್ ಆಗಿದ್ದು, ಫೋಟೋ ಶೂಟ್ ಬಳಿಕ ಐಶ್ವರ್ಯ, ' ಈಗ ನಾನು ಹೆಚ್ಚಿನ ಸಮಯವನ್ನು ಆರಾಧ್ಯ ಜೊತೆ ಕಳೆಯುತ್ತೇನೆ. ಶೂಟಿಂಗ್ , ಫೋಟೋಶೂಟ್ ಹಾಗೂ ಇಂಟರ್‌‌ ವ್ಯೂಗಳಿಗೆ ಸಮಯ ಹೊಂದಿಸುವುದು ಬಹಳ ಕಷ್ಟ. ಕುಟುಂಬಕ್ಕಾಗಿ ತಮ್ಮ ಸಮಯವನ್ನು ಮುಡಿಪಾಗಿಡುವ ಗೃಹಿಣಿಯರನ್ನು ನಾನೂ ಯಾವಾಗಲೂ ಗೌರವಿಸುತ್ತೇನೆ' ಎಂದಿದ್ದಾರೆ.

short by Pawan / read more at 60secondsnow

Comments