Skip to main content


ರನ್ನಿಂಗ್ ಡೈವ್ ಮಾಡಿ ಕ್ಯಾಚ್ ಪಡೆದ ಕೊಹ್ಲಿ – ಅನುಷ್ಕಾ ಕೊಟ್ಟ ರಿಯಾಕ್ಷನ್ ಹೀಗಿದೆ!

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ, ಕೆಕೆಆರ್ ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಓಡಿ ಬಂದು ಡೈವ್ ಮಾಡಿ ಕ್ಯಾಚ್ ಪಡೆದುಕೊಂಡಿದ್ದನ್ನು ನೋಡಿ ಪತ್ನಿ ಅನುಷ್ಕಾ ಶರ್ಮಾ ಆಶ್ಚರ್ಯಗೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆರ್‌ಸಿಬಿ ನೀಡಿದ 175 ರನ್ ಗಳ ಗುರಿ ಬೆನ್ನತ್ತಿದ್ದ ಕೆಕೆಆರ್ ತಂಡದ ಆಟಗಾರರು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಪಂದ್ಯ 19ನೇ ಓವರ್ ನಲ್ಲಿ ಕೆಕೆಆರ್ ನಾಯಕ ದಿನೇಶ್ ಕಾರ್ತಿಕ್ (10 ಎಸೆತ, 23 ರನ್) ಭಾರೀ ಹೊಡೆತಕ್ಕೆ ಕೈ ಹಾಕಿದರು. ಈ ವೇಳೆ ಬೌಂಡರಿ ಬಳಿ ಇದ್ದ ಕೊಹ್ಲಿ ರನ್ನಿಂಗ್ ಡೈವ್ ಮಾಡುವ ಮೂಲಕ ಕ್ಯಾಚ್ ಪಡೆದರು.  ಆರ್‌ಸಿಬಿ ಪರ ಬೆಂಬಲಿಸಲು ಆಗಮಿಸಿದ್ದ ಅನುಷ್ಕಾ ಶರ್ಮಾ, ಕೊಹ್ಲಿ ಪಡೆದ ಕ್ಯಾಚ್ ನೋಡಿ ಅಚ್ಚರಿ ವ್ಯಕ್ತಪಡಿಸಿದರು.ಕೊಹ್ಲಿ ಈ ವೇಳೆ ಉತ್ತಮ ಕ್ಯಾಚ್ ಪಡೆದರೂ ಸಹ ಯಾವುದೇ ಸಂಭ್ರಮ ವ್ಯಕ್ತಪಡಿಸಲಿಲ್ಲ. ಕೊಹ್ಲಿ ಪಂದ್ಯದಲ್ಲಿ 33ನೇ ಅರ್ಧಶತಕ ಸಿಡಿಸಿ ಏಕಾಂಗಿ ಹೋರಾಟ ನಡೆಸಿದರೂ ಬೌಲಿಂಗ್ ವೈಫಲ್ಯದಿಂದಾಗಿ ಆರ್‌ಸಿಬಿ ಸೋಲುಂಡಿತು.            

short by Prajwal / more at PublicTV

Comments