Skip to main content


ನ್ಯೂಯಾರ್ಕ್‌ನಲ್ಲಿ ನೀರವ್‌ ಮೋದಿ?

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಲ್ಲಿ ನಡೆದ 13,000 ಕೋಟಿ ರೂ. ಸುಸ್ತಿ ಸಾಲ ಹಗರಣದ ಪ್ರಮುಖ ಆರೋಪಿ, ವಜ್ರದ ವ್ಯಾಪಾರಿ ನೀರವ್‌ ಮೋದಿ, ನ್ಯೂಯಾರ್ಕ್‌ನಲ್ಲಿ ತನ್ನ ರದ್ದಾಗಿರುವ ಪಾಸ್‌ಪೋರ್ಟ್‌ ಜತೆ ಸಂಚರಿಸುತ್ತಿದ್ದಾರೆ ಎಂದು ವರದಿಯಾಗಿದೆ. ಜನವರಿ ಮೊದಲ ವಾರದಲ್ಲಿ ನೀರವ್‌ ಮೋದಿ ಭಾರತವನ್ನು ತೊರೆದಿದ್ದರು. ಮೂಲಗಳ ಪ್ರಕಾರ ಆತ ಮುಂಬಯಿನಿಂದ ಯುಎಇ, ನಂತರ ಹಾಂಕಾಂಗ್‌ ಮತ್ತು ಲಂಡನ್‌ಗೆ ತೆರಳಿ, ಈಗ ನ್ಯೂಯಾರ್ಕ್‌ ಸೇರಿದ್ದಾನೆ.           

short by NP / more at Vijaya Karnataka

Comments