Skip to main content


ಕಣ್ಸನ್ನೆ ಹುಡುಗಿಗೆ ಮೊದಲ ಪ್ರಶಸ್ತಿ

ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ಗೆ ಮೊದಲ ಪ್ರಶಸ್ತಿ ಸಿಕ್ಕಿದೆ. ಔಟ್ ಲುಕ್ ಸೋಶಿಯಲ್ ಮೀಡಿಯಾ ಅವಾರ್ಡ್ ಗೆ ಮಲಯಾಳಂ ನಟಿ ಭಾಜನರಾಗಿದ್ದಾರೆ.ಕಣ್ಸನ್ನೆಯಿಂದಲೇ ಕೋಟ್ಯಂತರ ಅಭಿಮಾನಿಗಳ ಮನಗೆದ್ದ ಪ್ರಿಯಾ ವಾರಿಯರ್ ತನ್ನ ಚೊಚ್ಚಲ ಸಿನಿಮಾ ಬಿಡುಗಡೆಗೂ ಮುನ್ನವೇ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ವೈರಲ್ ಪರ್ಸನಾಲಿಟಿ ಆಫ್ ದ ಇಯರ್ ವಿಭಾಗದಲ್ಲಿ ಪ್ರಿಯಾಗೆ ಈ ಪ್ರಶಸ್ತಿ ದೊರೆತಿದೆ. ಸಮಾರಂಭಕ್ಕೆ ವೈನ್ ಕಲರ್ ಆಫ್ ಶೋಲ್ಡರ್ ಬಲ್ರೂಮ್ ಗೌನ್ ಧರಿಸಿ ಬಂದಿದ್ದ ಪ್ರಿಯಾ ಮುದ್ದಾಗಿ ಕಾಣುತ್ತಿದ್ದರು.ಇನ್ನು ಸಮಾರಂಭದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ರಾಜ್ ಕುಮಾರ್ ರಾವ್ ಹಾಗೂ ಅಥಿಯಾ ಶೆಟ್ಟಿ ಇವರಿಗೆ ಔಟ್ ಲುಕ್ ಸೋಶಿಯಲ್ ಮೀಡಿಯಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

short by: Nithin / more at Kannadadunia


Comments