Skip to main content


ಭಾರತದ ಬಾಕ್ಸರ್‌ಗಳ ಪಾರಮ್ಯ

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತದ ಬಾಕ್ಸರ್‌ಗಳ ಪಾರಮ್ಯ ಮುಂದುವರಿದಿದೆ. ಮೂರನೇ ದಿನವಾದ ಶನಿವಾರ ಅನುಭವಿ ಬಾಕ್ಸರ್‌ಗಳಾದ ಎಲ್.ಸರಿತಾ ದೇವಿ ಮತ್ತು ಮನೋಜ್ ಕುಮಾರ್‌ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಇವರು ಕ್ರಮವಾಗಿ 60 ಮತ್ತು 59 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ. ಯುವ ಕ್ರೀಡಾಪಟು, ಇದೇ ಮೊದಲ ಬಾರಿ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ಮಹಮ್ಮದ್‌ ಹುಸಮುದ್ದೀನ್‌ 56 ಕೆ.ಜಿ ವಿಭಾಗದಲ್ಲಿ ಎಂಟರ ಘಟ್ಟ ಪ್ರವೇಶಿಸಿದ್ದಾರೆ. ಕಳದ ಬಾರಿಯ ಕೂಟದಲ್ಲಿ ಕಂಚಿನ ಪದಕ ಗೆದ್ದಿದ್ದ ಸರಿತಾ ದೇವಿ ಅವರಿಗೆ ಪ್ರಿ ಕ್ವಾರ್ಟರ್‌ ಫೈನಲ್‌ಗೆ ಬೈ ಸಿಕ್ಕಿತ್ತು. ಶನಿವಾರ ಆರಂಭದಿಂದಲೇ ಎದುರಾಳಿ, ಬಾರ್ಬಡೀಸ್‌ನ ಕಿಂಬರ್ಲಿ ಗಿಟನ್ಸ್‌ ಮೇಲೆ ಆಧಿಪತ್ಯ ಸ್ಥಾಪಿಸಿದ ಅವರು ಸುಲಭವಾಗಿ ಗೆದ್ದರು.               
Short by Prajwal / read more at Prajavani