Skip to main content


ಸೆಲ್ಫಿ ತೆಗೆಯಲು ಹೋಗಿ ಸಮುದ್ರ ಪಾಲಾಗಿದ್ದ ಯುವಕನ ರಕ್ಷಣೆ

ಸೆಲ್ಫಿ ತೆಗೆದುಕೊಳ್ಳುವುದು ಇಂದಿನ ಯುವ ಜನತೆಯಲ್ಲಿ ಟ್ರೆಂಡ್ ಆಗಿ ಬದಲಾಗಿದೆ. ಎತ್ತರದ ಸ್ಥಳದಿಂದಲೋ ಅಥವಾ ತುದಿ ಅಂಚಿನಿಂದಲೋ ಸೆಲ್ಫಿ ತೆಗೆದುಕೊಳ್ಳುತ್ತಾರೆ. ಈ ವೇಳೆ ಸ್ವಲ್ಪ ಎಚ್ಚರ ತಪ್ಪಿದ್ರೂ ಅಪಾಯ ಕಟ್ಟಿಟ್ಟ ಬುತ್ತಿ. ಸೆಲ್ಫಿ ಅವಘಡಗಳ ಬಗ್ಗೆ ಸಾಕಷ್ಟು ವರದಿಗಳು ಬಿತ್ತರವಾದ್ರೂ ಯುವ ಜನತೆ ಸೆಲ್ಫಿಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಫೋಟೋ ಮೊರೆ ಹೋಗ್ತಾರೆ. ಸೆಲ್ಫಿ ತೆಗೆಯಲು ಹೋಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದ ಪ್ರವಾಸಿಗನನ್ನು ರಕ್ಷಿಸಿದ ಘಟನೆಯೊಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ‘ಓಂ ಬೀಚ್’ನಲ್ಲಿ ನಡೆದಿದೆ.        

short by NP / read more at Public TV

Comments