Skip to main content


ತಾರತಮ್ಯ ವಿರುದ್ಧ ಆಕ್ರೋಶ

ಕೇಂದ್ರದ ತೆರಿಗೆ ವರಮಾನ ಹಂಚಿಕೆಗೆ 15ನೇ ಹಣಕಾಸು ಆಯೋಗವು ಶಿಫಾರಸು ಮಾಡಿರುವ ನಿಯಮಗಳಿಗೆ ದಕ್ಷಿಣ ಭಾರತದ ಮೂರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿ ವಿರೋಧ ವ್ಯಕ್ತಪಡಿಸಿವೆ.ಈ ಹೋರಾಟವನ್ನು ಮುಂದುವರಿಸಲು ಮತ್ತು ಇದಕ್ಕೆ ಇನ್ನಷ್ಟು ರಾಜ್ಯಗಳ ಬೆಂಬಲ ಕ್ರೋಡೀಕರಿಸಲು ನಿರ್ಧರಿಸಿವೆ.       

ಕೇರಳದ ಆತಿಥ್ಯದಲ್ಲಿ ತಿರುವನಂತಪುರದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಪುದುಚೇರಿ ಮುಖ್ಯಮತ್ರಿ ವಿ.ನಾರಾಯಣಸ್ವಾಮಿ, ಆಂಧ್ರಪ್ರದೇಶ ಹಣಕಾಸು ಸಚಿವ ಯನಮಲ ರಾಮಕೃಷ್ಣುಡು ಮತ್ತು ಕರ್ನಾಟಕದ ಕೃಷಿ ಸಚಿವ ಕೃಷ್ಣಬೈರೇಗೌಡ ಅವರು ಭಾಗವಹಿಸಿದ್ದರು.       

short by NP / read more at Prajavani

Comments