Skip to main content


ಶ್ರೀ ರೆಡ್ಡಿಯಂತೆ ಈ ನಟಿ ಕೂಡ ಬೆತ್ತಲಾಗಿ ಹೋರಾಟ ಮಾಡ್ತಾರಂತೆ.

ತೆಲುಗು ಸಿನಿಮಾ ರಂಗದಲ್ಲಿ ಕ್ಯಾಸ್ಟಿಂಗ್ ಕೌಚ್ ವಿಚಾರ ತಾರಕಕ್ಕೇರಿರುವುದು ನಮಗೆಲ್ಲ ತಿಳಿದ ವಿಷಯ.ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೋರ್ವ ನಟಿ ಶಾಕಿಂಗ್ ನ್ಯೂಸ್ ಹರಿ ಬಿಟ್ಟಿದ್ದಾರೆ.ಶ್ರೀರೆಡ್ಡಿಯ ಹೋರಾಟಕ್ಕೆ ಬೆಂಬಲವಾಗಿ ನಿಂತಿರುವ ಮಾಧವಿ ಲತಾ ತಮ್ಮ ಫೇಸ್ ಬುಕ್ ಹಾಗು ಟ್ವಿಟ್ಟರ್ ಮೂಲಕ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ನಾವೆಲ್ಲ ನಮಗಾಗಿರುವ ದೌರ್ಜನ್ಯದ ವಿರುದ್ದ ನ್ಯಾಯವಾದ ನೆಲೆಗಟ್ಟಿನಲ್ಲಿ ಹೋರಾಡುತ್ತಿದ್ದೇವೆ ಇದನ್ನೇ ನೀವು ಪ್ರಚಾರ ಗಿಟ್ಟಿಸಿಕೊಳ್ಳುವ ಅಸ್ತ್ರ ಎಂದರೆ ನಮಗೆ ಸಹಿಸಿಕೊಳ್ಳಲು ಆಗುವುದಿಲ್ಲ ಹಾಗೆಯೇ ನಮ್ಮ ಸ್ಥಾನದಲ್ಲಿ ನೀವಿದ್ದಿದ್ದರೆ ನಿಮಗೆ ಅರ್ಥವಾಗುತ್ತಿತ್ತು. ಏನೇ ಇರಲಿ ನಾವು ಈ ಹೋರಾಟವನ್ನು ಕೈ ಬಿಡುವ ಮಾತೇ ಇಲ್ಲ, ಒಂದು ವೇಳೆ ನಮಗೆ ನ್ಯಾಯ ಸಿಗದೇ ಹೋದಲ್ಲಿ ಖಂಡಿತವಾಗಿಯೂ ಬಹಿರಂಗವಾಗಿ ನಟಿ ಶ್ರೀರೆಡ್ಡಿಯವರ ಹಾಗೆಯೇ ನಾನು ಸಹ ಬೆತ್ತಲೆ ಹೋರಾಟ ಮಾಡುತ್ತೇನೆ ಎಂದು ಮಾಧವಿ ಲತಾ ಶಾಕಿಂಗ್ ಹೇಳಿಕೆ  ನೀಡಿದ್ದಾರೆ.

short by: Nithin.