Skip to main content


ವಿಶ್ವ ದಾಖಲೆ ನಿರ್ಮಿಸಿದ ಹಲ್ಮೇರಿ ಎಸ್ಟೇಟ್ ಚಹಾಪುಡಿ, ಬೆಲೆ ಎಷ್ಟು ಗೊತ್ತೇ?

ಅಸ್ಸಾಂನ ಹಲ್ಮೇರಿ ಎಸ್ಟೇಟ್, ತನ್ನ ಸಿಟಿಸಿ ಚಹಾಗೆ ಅಖಿಲ ಭಾರತ ಹರಾಜಿನಲ್ಲಿ ಪ್ರತಿ ಕೆ.ಜಿ.ಗೆ 700 ರೂಪಾಯಿ ಬೆಲೆ ಪಡೆಯುವ ಮೂಲಕ ವಿಶ್ವದಾಖಲೆ ನಿರ್ಮಿಸಿದೆ. ಈ ಹಿಂದೆ ಇದೇ ಕಂಪೆನಿ ಸೆಕೆಂಡ್ ಫ್ಲಶ್ ಚಹಾಗೆ 2016ರ ಜುಲೈ 14ರಂದು ಪ್ರತಿ ಕೆ.ಜಿ.ಗೆ 600 ರೂ. ದರ ಪಡೆದದ್ದು ಇದುವರೆಗಿನ ದಾಖಲೆಯಾಗಿತ್ತು. ಕೊಲ್ಕತ್ತಾ ಮೂಲದ ಜೆಎ.ಥಾಮಸ್ ಆ್ಯಂಡ್ ಕಂಪೆನಿ ಹರಾಜು ಮಾಡಿದ ಚಹಾ(ಮಾರಾಟ ಸಂಖ್ಯೆ 17)ವನ್ನು ದಕ್ಷಿಣ ಕೊಲ್ಕತ್ತಾದ ಖ್ಯಾತ ಚಿಲ್ಲರೆ ಮಾರಾಟ ಕಂಪೆನಿಯಾದ ಮಹಾಬೋಧಿ ಟೀ ಹೌಸ್ ಖರೀದಿಸಿದೆ. ಒಟ್ಟು 307.8 ಕೆಜಿ ಫಸ್ಟ್ ಫ್ಲಶ್ ಹಲ್ಮರಿ ಬ್ರೋಕನ್ ಆರೆಂಜ್ ಪೆಕೊವ್ (ಬಿಓಪಿ)ಯನ್ನು ಪ್ರತಿ ಕೆ.ಜಿ.ಗೆ 700 ರೂಪಾಯಿ ದರದಲ್ಲಿ ಖರೀದಿ ಮಾಡಿದೆ.      

short by Pawan / more at Varthabharathi

Comments