Skip to main content


ಸಿದ್ದರಾಮಯ್ಯ ಉಚಿತ ಅಕ್ಕಿ ನೀಡಿದ್ರು, ಬಿಎಸ್‍ವೈ ಏನು ಮಾಡಿದ್ದಾರೆ : ರಾಹುಲ್ ಗಾಂಧಿ

ರಾಜ್ಯದ ಜನರ ಹಸಿವನ್ನು ನೀಗಿಸಲು ಸಿದ್ದರಾಮಯ್ಯ ಅವರು ಉಚಿತ ಅಕ್ಕಿ ನೀಡಿದ್ದಾರೆ. ಆದರೆ ಬಿಎಸ್‍ವೈ ಅಧಿಕಾರ ಅವಧಿಯಲ್ಲಿದ್ದಾಗ ಏನು ಮಾಡಿದ್ದರು ಎಂದು ಪ್ರಶ್ನಿಸಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಇಂದು ನಗರದ ಟೌನ್ ಹಾಲ್‍ನಲ್ಲಿ ಸೇರಿದ್ದ ಸಾವಿರಾರು ಜನರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಕೇಂದ್ರ ನೀತಿಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮೋದಿಯವರಿಂದ ಯಾರ ಖಾತೆಗಾದರೂ 15 ಲಕ್ಷ ರೂ. ಪಾವತಿ ಆಗಿದ್ಯಾ ಎಂದು ಕರ್ನಾಟಕದ ಯುವಕರು ಉತ್ತರಿಸಬೇಕು ಎಂದರು. ಅಷ್ಟೇ ಅಲ್ಲದೇ ಹಣಕಾಸು ಸಚಿವ ಅರುಣ್ ಜೇಟ್ಲಿ ನೀರವ್ ಮೋದಿಯ ವಕೀಲರು ಎಂದು ಹೇಳಿ ವಾಗ್ದಾಳಿ ನಡೆಸಿದರು.     

short by NP / read more at Public TV

Comments