Skip to main content


ಮೇಘನಾ ಗಾಂವ್ಕರ್ ಹೇಳಿಕೆಗೆ ಕೈ ಜೋಡಿಸಿದ ರಶ್ಮಿಕಾ.!

ಬಾಲಿವುಡ್ ಮುದ್ದು ನಟಿ ಆಲಿಯಾ ಭಟ್ ಅಭಿನಯದ 'ರಾಝಿ' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಇಂಡಿಯಾ-ಪಾಕಿಸ್ತಾನದ ಕುರಿತು ಸಿನಿಮಾ ಇದಾಗಿದ್ದು, ಬಹಳ ರೋಚಕವಾಗಿ ಚಿತ್ರಕಥೆ ಮಾಡಲಾಗಿದೆ. ರಾಝಿ' ಚಿತ್ರದಲ್ಲಿ ಆಲಿಯಾ ಅಭಿನಯದ ಝಲಕ್ ಕಂಡು  ಸ್ಯಾಂಡಲ್ ವುಡ್ ಮಂದಿ ಕೂಡ ಫಿದಾ ಆಗಿದ್ದಾರೆ. ಹೌದು, 'ರಾಝಿ' ಚಿತ್ರದ ಟ್ರೈಲರ್ ನೋಡಿ ಮೆಚ್ಚಿಕೊಂಡಿರುವ ನಟಿ ಮೇಘನಾ ಗಾಂವ್ಕರ್, ಇಂತಹ ಸಿನಿಮಾಗಳು ಕನ್ನಡದಲ್ಲಿ ಬರಲಿ ಎಂಬ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.ಹೌದು, ರಾಝಿ ಟ್ರೈಲರ್ ನೋಡಿ ಟ್ವೀಟ್ ಮಾಡಿರುವ ಮೇಘನಾ ''ನಮ್ಮ ಕನ್ನಡದಲ್ಲೂ ಕೂಡ ಅದ್ಭುತ ಕಥೆಗಳೊಂದಿಗೆ ಮಹಿಳಾ ಪ್ರಧಾನ ಸಿನಿಮಾಗಳನ್ನ ಮಾಡ್ತೀವಿ.ಆ ಭರವಸೆ ನನಗಿದೆ'' ಎಂದು ಅಭಿಪ್ರಾಯ ಪಟ್ಟಿದ್ದಾರೆ.ಮೇಘನಾ ಗಾಂವ್ಕರ್ ಅವರ ಈ ಹೇಳಿಕೆಗೆ ಕನ್ನಡದ ಮತ್ತೊಬ್ಬ ನಟಿ ರಶ್ಮಿಕಾ ಮಂದಣ್ಣ ಕೂಡ ಕೈ ಜೋಡಿಸಿದ್ದು, ''ನಾನು ಕೂಡ ಇದಕ್ಕೆ ಒಪ್ಪುತ್ತೇನೆ'' ಎಂದಿದ್ದಾರೆ.

short by : Nithin / read more at Filmibeat

Comments