Skip to main content


ಸೋಲಿನ ಬಳಿಕ ಆರ್‌ಸಿಬಿ ಆಟಗಾರರ ವಿರುದ್ಧ ಕೊಹ್ಲಿ ಗರಂ

ಐಪಿಎಲ್ 11ನೇ ಆವೃತ್ತಿಯಲ್ಲಿ ಆರ್‌ಸಿಬಿ ಆಟಗಾರರ ಸೋಲಿನ ಸರಣಿ ಮುಂದುವರೆದಿದ್ದು, ಕೆಕೆಆರ್ ವಿರುದ್ಧ ಭಾನುವಾರ ನಡೆದ ಪಂದ್ಯವನ್ನು ಕೈಚೆಲ್ಲಿದ್ದ ಬಳಿಕ ತಂಡದ ಆಟಗಾರರ ವಿರುದ್ಧ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಂದ್ಯದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಕೊಹ್ಲಿ, ಇದೇ ರೀತಿ ಮುಂದಿನ ಪಂದ್ಯಗಳಲ್ಲಿ ತಂಡದ ಆಟಗಾರರು ಕಳಪೆ ಫೀಲ್ಡಿಂಗ್ ಪ್ರದರ್ಶನ ಮುಂದುವರೆಸಿದರೆ ಗೆಲುವು ಪಡೆಯಲು ಸಾಧ್ಯವಿಲ್ಲ. ನಾವು ಗೆಲುವಿಗಾಗಿ ಮತ್ತಷ್ಟು ಶ್ರಮವಹಿಸಬೇಕಿದೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಆಟಗಾರನ್ನು ನಾನು ಗುರಿ ಮಾಡುವುದಿಲ್ಲ. ಈ ಆವೃತ್ತಿಯಲ್ಲಿ ಮುಂದಿನ ಹಂತಕ್ಕೆ ಆಯ್ಕೆ ಆಗಬೇಕಾದರೆ ಇನ್ನುಳಿದ 7 ಪಂದ್ಯದಲ್ಲಿ 6 ಪಂದ್ಯಗಳನ್ನು ಗೆಲ್ಲುವ ಅನಿವಾರ್ಯತೆ ಇದೆ. ಅದ್ದರಿಂದ ಪ್ರತಿಯೊಂದು ಪಂದ್ಯವು ತಂಡಕ್ಕೆ ಸೆಮಿಫೈನಲ್ ಪಂದ್ಯ ಎಂದು ಭಾವಿಸಬೇಕಿದೆ ಎಂದರು.          

short by Prajwal / more at PublicTV

Comments