Skip to main content


ರಾಯಲ್ ಚಾಲೆಂಜರ್ಸ್‌ ಬೆಂಗಳೂರು–ಡೆಲ್ಲಿ ಡೇರ್‌ಡೆವಿಲ್ಸ್‌ ನಡುವಣ ಪಂದ್ಯ ಇಂದು

ದೆಹಲಿ ಅಂಗಳಗಳಲ್ಲಿ ಆಡಿ ಬೆಳೆದ ಇಬ್ಬರು ಕ್ರಿಕೆಟಿಗರ ನಡುವಣ ಹಣಾಹಣಿಗೆ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗಿದೆ. ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಮತ್ತು ಗೌತಮ್ ಗಂಭೀರ್ ಮುಂದಾಳತ್ವದ ಡೆಲ್ಲಿ ಡೇರ್‌ಡೆವಿಲ್ಸ್‌ (ಡಿಡಿ) ತಂಡಗಳು ಶನಿವಾರ ನಡೆಯಲಿರುವಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ವಿರಾಟ್ ಮತ್ತು ಗೌತಮ್ ಇಬ್ಬರೂ ದೆಹಲಿಯವರೇ. ಆದರೆ ಕಳೆದ ಹತ್ತು ವರ್ಷಗಳಿಂದ ವಿರಾಟ್ ಆರ್‌ಸಿಬಿ ನಾಯಕರಾಗಿದ್ದಾರೆ. ಗೌತಮ್ ಕೂಡ ಇದೇ ಮೊದಲ ಬಾರಿಗೆ ತಮ್ಮ ತವರಿನ ತಂಡವನ್ನು ಮುನ್ನಡೆಸುತ್ತಿದ್ದಾರೆ. ಕಳೆದ ವರ್ಷಗಳಲ್ಲಿ ಅವರು ಕೋಲ್ಕತ್ತ ನೈಟ್ ರೈಡರ್ಸ್‌ (ಕೆಕೆಆರ್) ತಂಡದಲ್ಲಿದ್ದರು. ಇದೀಗ ಯುವ ಮತ್ತು ಅನುಭವಿ ಆಟಗಾರರು ಇರುವ ಡೆಲ್ಲಿ ತಂಡವನ್ನೂ ಜಯದತ್ತ ಮುನ್ನಡೆಸುವ ಗುರಿಯೊಂದಿಗೆ ಡೆಲ್ಲಿ ತಂಡದ ಚುಕ್ಕಾಣಿ ಹಿಡಿದಿದ್ದಾರೆ. ಆದರೆ  ಈ ಟೂರ್ನಿಯಲ್ಲಿ ಇಲ್ಲಿಯವರೆಗೆ ಆಡಿರುವ ನಾಲ್ಕು ಪಂದ್ಯಗಳಲ್ಲಿ ಒಂದು ಗೆಲುವು ಮಾತ್ರ ಒಲಿದಿದೆ.      

short by Prajwal / read more at Prajavani


Comments