Skip to main content


ಪುನೀತ್‌‌ಗೂ ಮುನ್ನ "ಕನ್ನಡದ ಕೋಟ್ಯಾಧಿಪತಿ"ಯನ್ನು ಯಾರು ನಡೆಸಿಕೊಡಬೇಕಿತ್ತು ಗೊತ್ತಾ?

`ಕನ್ನಡದ ಕೋಟ್ಯಾಧಿಪತಿ' ಎರಡು ಸೀಸನ್‍ಗಳನ್ನು ಪುನೀತ್ ರಾಜಕುಮಾರ್ ನಡೆಸಿಕೊಟ್ಟಿದ್ದು, ಈ ಬಾರಿ ರಮೇಶ್ ಅರವಿಂದ್ ನಡೆಸಿಕೊಡುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ವಿಷಯ ಅದಲ್ಲ, ಪುನೀತ್‍ಗಿಂತ ಮುನ್ನ `ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮವನ್ನು ಯಾರು ನಡೆಸಿಕೊಡಬೇಕಿತ್ತು ಗೊತ್ತಾ? ರಮೇಶ್ ಅರವಿಂದ್ ಎಂದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಇತ್ತೀಚೆಗೆ ನಡೆದ ಕಾರ್ಯಕ್ರಮದ ಪತ್ರಿಕಾಗೋಷ್ಠಿಯಲ್ಲಿ ಅವರೇ ಹೇಳಿಕೊಂಡಿದ್ದಾರೆ. `ಈ ಕಾರ್ಯಕ್ರಮ ನನಗೆ ತುಂಬಾ ಇಷ್ಟ. ಅದಕ್ಕೆ ತಕ್ಕಂತೆ ಆರಂಭದಲ್ಲಿ ಈ ಕಾರ್ಯಕ್ರಮ ಕನ್ನಡದಲ್ಲಿ ಆಗುತ್ತದೆ ಎಂದಾಗ ಅದರ ನಿರೂಪಣೆ ಮಾಡುವ ಜವಾಬ್ದಾರಿ ನನಗೆ ಬಂದಿತ್ತು. ನಾನು ಸಹ ನನ್ನದೇ ರೀತಿಯಲ್ಲಿ ಸಾಕಷ್ಟು ತಯಾರಿಗಳನ್ನು ಮಾಡಿಕೊಂಡಿದ್ದೆ. ಇನ್ನೇನು ಶೋ ಶುರುವಾಗಬೇಕೆನ್ನುವಷ್ಟರಲ್ಲಿ ಆ ಕಾರ್ಯಕ್ರಮ ಮತ್ತೊಂದು ವಾಹಿನಿಗೆ ಶಿಫ್ಟ್ ಆಯಿತು. ಆ ನಂತರ ಎಲ್ಲವೂ ಬದಲಾಯಿತು' ಎನ್ನುತ್ತಾರೆ ರಮೇಶ್.h

short by Prajwal / more at Eenadu India

Comments