Skip to main content


ವಾಟ್ಸ್‌ಆಪ್‌ ಗ್ರೂಪ್ ಆಡ್ಮಿನ್‌ಗಳಿಗೆ ಉಳಿಗಾಲವಿಲ್ಲ..! ಸದಸ್ಯರಿಗೆ ಹೊಸ ಅಸ್ತ್ರ.!

ಡಿಸ್‌ಮಿಸ್ ಆಡ್ಮಿನ್:
ವಾಟ್ಸ್‌ಆಪ್‌ ಗ್ರೂಪ್‌ಗಳ ಆಡ್ಮಿನ್ ಗಳನ್ನು ಕಿತ್ತು ಹಾಕುವ ಸಲುವಾಗಿ ಡಿಸ್‌ಮಿಸ್ ಆಡ್ಮಿನ್ ಎನ್ನುವ ಆಯ್ಕೆಯೊಂದನ್ನು ಗ್ರೂಪ್ ಗಳಲ್ಲಿ ನೀಡಲು ವಾಟ್ಸ್‌ಆಪ್ ಮುಂದಾಗಿದೆ. ಸದ್ಯ ಈ ಆಯ್ಕೆಯೂ ಪ್ರಯೋಗ ಹಂತದಲ್ಲಿದ್ದು, ಶೀಘ್ರವೇ ಸಾಮಾನ್ಯ ಬಳಕೆದಾರರಿಗೆ ದೊರೆಯಲಿದೆ.

ಆದ್ಯತೆ ನೋಟಿಫಿಕೇಷನ್:
ಇದು ಹೊಸದಾಗಿ ವಾಟ್ಸ್‌ಆಪ್ ನೀಡಿರುವ ಆಯ್ಕೆಯಾಗಿದ್ದು, ನಿಮಗೆ ಬೇಕಾದ ವ್ಯಕ್ತಿಯ ಚಾಟ್ ಅನ್ನು ಪಿನ್ ಟು ಟಾಪ್ ಮಾಡಿಕೊಳ್ಳುವ ಮಾದರಿಯಲ್ಲಿ ನಿಮಗೆ ಬೇಕಾದ ವ್ಯಕ್ತಿಯ ಚಾಟ್ ಇಲ್ಲವೇ ಗ್ರೂಪ್ ನೋಷಿಫಿಕೇಷನ್ ಮೊದಲು ತೋರಿಸುವಂತೆ ಆದ್ಯತೆ ನೋಷಿಫಿಕೇಷನ್ ಇಟ್ಟು ಕೊಳ್ಳಬಹುದಾಗಿದೆ.

ಹಣಕ್ಕಾಗಿ ಮನವಿ:
ಹೊಸದಾಗಿ ಕಾರ್ಯಚರಣೆಯನ್ನು ಆರಂಭಿಸಿರುವ ವಾಟ್ಸ್‌ಆಪ್ ಪೇಮೆಂಟ್ ಸೇವೆಯಲ್ಲಿ ಬಳಕೆದಾರರು ಹಣವನ್ನು ಕಳುಹಿಸುವ ಮಾದರಿಯಲ್ಲಿ, ಗೂಗಲ್ ತೇಜ್ ನಲ್ಲಿ ಹಣವನ್ನು ರಿಕ್ವೆಸ್ಟ್ ಮಾಡುವ ಮಾದರಿಯಲ್ಲಿ ವಾಟ್ಸ್‌ಆಪ್ ನಲ್ಲಿಯೂ ಸ್ನೇಹಿತರಿಗೆ ಹಣಕಳುಹಿಸಲು ಮನವಿಯನ್ನು ಮಾಡಬಹುದಾಗಿದೆ.

ಫೋಟೋ ಡಿಲೀಟ್ ಆದರೆ ಚಿಂತೆ ಇಲ್ಲ:
ಚಾಟಿಂಗ್‌ನಲ್ಲಿ ಡಿಲೀಟ್ ಮಾಡಿದ ಫೋಟೋಗಳನ್ನು ಮತ್ತೇ ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶವನ್ನು ವಾಟ್ಸ್‌ಆಪ್ ನೀಡಿದೆ. ನಿಮ್ಮ ಎಲ್ಲಾ ವಿಡಿಯೋ, ಜಿಫ್ ಮತ್ತು ಫೋಟೋಗಳು ವಾಟ್ಸ್‌ಆಪ್ ತನ್ನ ಸರ್ವರ್‌ನಲ್ಲಿ ಸೇವ್ ಮಾಡಿಕೊಳ್ಳಲಿದೆ. ನಿಮಗೆ ಬೇಕಾದ ಸಂದರ್ಭದಲ್ಲಿ ನೀವು ಮತ್ತೇ ಅವುಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

short by: Sp / more at DailyHunt

Comments