Skip to main content


ಮಿಲ್ಖಾ ಸಿಂಗ್ ನಂತರ ಕಾಮನ್ ವೆಲ್ತ್ ಗೇಮ್ಸ್ ಫೈನಲ್ ತಲುಪಿದ ಮುಹಮ್ಮದ್ ಅನಸ್

ಫ್ಲೈಯಿಂಗ್ ಸಿಖ್' ಖ್ಯಾತಿಯ ಮಿಲ್ಖಾ ಸಿಂಗ್ ನಂತರ ಕಾಮನ್ ವೆಲ್ತ್ ಗೇಮ್ಸ್ ನ ಫೈನಲ್ ತಲುಪಿರುವ ಭಾರತದ ಎರಡನೆ ಅಥ್ಲೀಟ್ ಆಗಿ ಮುಹಮ್ಮದ್ ಅನಸ್ ಯಹ್ಯಾ ಹೊರಹೊಮ್ಮಿದ್ದಾರೆ.400 ಮೀಟರ್ ಓಟದ ಸೆಮಿಫೈನಲ್ ನಲ್ಲಿ 45.44 ಸೆಕೆಂಡುಗಳಲ್ಲಿ ಅವರು ಗುರಿಯನ್ನು ತಲುಪಿದರು. 1958ರ ಮೆಲ್ಬೋರ್ನ್ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಮಿಲ್ಖಾ ಸಿಂಗ್ ಅವರ ದಾಖಲೆಗಿಂತಲೂ ವೇಗವಾಗಿ ಅನಸ್ ಗುರಿ ತಲುಪಿದ್ದಾರೆ. ಮೆಲ್ಬೋರ್ನ್ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಮಿಲ್ಖಾ 46.6 ಸೆಕೆಂಡುಗಳಲ್ಲಿ ಗುರಿ ತಲುಪಿದ್ದರು.ಮೆಲ್ಬೋರ್ನ್ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಈ ಸಾಧನೆಯೊಂದಿಗೆ ಮಿಲ್ಖಾ ಚಿನ್ನದ ಪದಕ ಗಳಿಸಿದ್ದರು. ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನ ಗೆದ್ದ ಸ್ವತಂತ್ರ ಭಾರತದ ಪ್ರಥಮ ಕ್ರೀಡಾಪಟುವಾಗಿ ಮಿಲ್ಖಾ ಹೊರಹೊಮ್ಮಿದ್ದರು.

short by: Nithin / read more at Varthabharathi

Comments