Skip to main content


ದ್ರಾವಿಡ್, ಕುಂಬ್ಳೆಗೆ ಟಿಕೆಟ್ ಆಫರ್ ನೀಡಿದ ಬಿಜೆಪಿ

ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದಿಂದ ಸ್ಪರ್ಧಿಸುವಂತೆ ಬಿಜೆಪಿ ಪಕ್ಷ ರಾಹುಲ್ ದ್ರಾವಿಡ್ ಹಾಗೂ ಅನಿಲ್ ಕುಂಬ್ಳೆ ಅವರಿಗೆ ಟಿಕೆಟ್ ಆಫರ್ ನೀಡಿದ್ದು, ಆದರೆ ಇದನ್ನು ಇಬ್ಬರು ಆಟಗಾರರು ನಿರಾಕರಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಮೂಲಗಳ ಪ್ರಕಾರ ಬಿಜೆಪಿ ಇಬ್ಬರು ಆಟಗಾರರನ್ನು ತಮ್ಮ ಪಕ್ಷದತ್ತ ಸೆಳೆಯಲು ಕಳೆದ ಕೆಲ ವಾರಗಳಿಂದ ಪ್ರಯತ್ನಿಸುತ್ತಿದ್ದು, ಸ್ಟಾರ್ ಆಟಗಾರ ಬೆಂಬಲ ನೀಡುವಂತೆ ಮನವಿ ಮಾಡಿತ್ತು ಎನ್ನಲಾಗಿದೆ. ಬಿಜೆಪಿ ನೀಡಿರುವ ಅವಕಾಶವನ್ನು ಕುಂಬ್ಳೆ ಹಾಗೂ ದ್ರಾವಿಡ್ ಇಬ್ಬರು ನಿರಾಕರಿಸಿದ್ದಾರೆ. ಆದರು ಬಿಜೆಪಿ ಸತತ ಮಾತುಕತೆಗಳನ್ನು ನಡೆಸುತ್ತಿದ್ದು, ಈ ಬಾರಿ ಅಲ್ಲದಿದ್ದರೂ ಮುಂದಿನ ಲೋಕಸಭಾ ಆಥವಾ ರಾಜ್ಯಸಭಾ ಚುನಾವಣೆ ಸ್ಥಾನ ನೀಡುವ ಬಗ್ಗೆ ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತು ಇಬ್ಬರು ಆಟಗಾರರು ಮಾಧ್ಯಮಗಳಿಗೆ ಹೇಳಿಕೆ ನೀಡಲು ನಿರಾಕರಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.     

short by NP / read more at Public TV

Comments