ಮಾಜಿ ಸಚಿವ, ಶಾಸಕ ಅಂಬರೀಶ್ ಗೆ ಕಾಂಗ್ರೆಸ್ನ ಬಿ ಫಾರಂ ಸಿಕ್ಕರೂ ಅದನ್ನು ಸ್ವೀಕರಿಸದೇ ಪಕ್ಷಕ್ಕೆ ರೆಬಲ್ ಆಗಿ ಉಳಿದುಕೊಂಡಿದ್ದಾರೆ. ಅಂಬರೀಶ್ ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದು ಬಹುತೇಕ ಅನುಮಾನ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಂಬರೀಶ್ ಸ್ಥಾನಕ್ಕೆ ಯಾರು ಬರುತ್ತಾರೆಂದು ಮಂಡ್ಯದ ಜನರಲ್ಲಿ ತೀವ್ರ ಕೂತುಹೂಲ ಹುಟ್ಟುಹಾಕಿದೆ. ಸಿಎಂ ಸಿದ್ದರಾಮಯ್ಯ ಸಹ ಅಂಬರೀಶ್ ಜೊತೆ ಮಾತನಾಡಲು ಮುಂದಾಗದೆ ಮಂಡ್ಯದಲ್ಲಿ ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿದ್ದಾರಂತೆ. ಮಾಜಿ ಸಚಿವ ಜಯರಾಂ ಪುತ್ರ ಅಶೋಕ್ ಜಯರಾಂ ಅವರನ್ನ ಜೆಡಿಎಸ್ ನಿಂದ ಪಕ್ಷಕ್ಕೆ ಕರೆ ತಂದು ಅಖಾಡಕ್ಕೆ ಇಳಿಸಲು ಕಾಂಗ್ರೆಸ್ ನಾಯಕರುಗಳು ಸಿದ್ಧತೆ ಆರಂಭಿಸಿದ್ದಾರೆ. ಆದ್ರೆ ಅಶೋಕ್ ಜಯರಾಂ ಇನ್ನು ತಮ್ಮ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಸ್ಪಷ್ಟ ಅಭಿಪ್ರಾಯ ತಿಳಿಸಿಲ್ಲ.
short by NP / read more at Public TV
Comments
Post a Comment