Skip to main content


ನಿರುದ್ಯೋಗಿಗಳಿಗೆ ಖುಷಿ ಸುದ್ದಿ ನೀಡಿದ ಜಿಯೋ

ಟೆಲಿಕಾಂ ವಲಯದ ಪ್ರಮುಖ ಕಂಪನಿ ರಿಲಾಯನ್ಸ್ ಜಿಯೋ ಈ ವರ್ಷ 80 ಸಾವಿರ ಜನರಿಗೆ ನೌಕರಿ ನೀಡಲಿದೆ. ಜಿಯೋದ ಮಾನವ ಸಂಪನ್ಮೂಲ ವಿಭಾಗದ ಮುಖ್ಯ ಅಧಿಕಾರಿ ಸಂಜಯ್ ಜೋಗ್ ಈ ವಿಷ್ಯವನ್ನು ತಿಳಿಸಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 70-80 ಸಾವಿರ ಉದ್ಯೋಗ ಸೃಷ್ಟಿಗೆ ಮುಂದಾಗಿರುವುದಾಗಿ ಸಂಜಯ್ ತಿಳಿಸಿದ್ದಾರೆ. ಜಿಯೋ ಸುಮಾರು 6,000 ಕಾಲೇಜುಗಳ ಜೊತೆ ಒಪ್ಪಂದ ಮಾಡಿಕೊಂಡಿದೆ. ಇದ್ರಲ್ಲಿ ತಾಂತ್ರಿಕ ಸಂಸ್ಥೆಗಳೂ ಸೇರಿವೆ. ಕೆಲ ಕಾಲೇಜುಗಳಲ್ಲಿ ಉದ್ಯಮಕ್ಕೆ ಸಂಬಂಧಿಸಿದ ಶಿಕ್ಷಣ ನೀಡಲಾಗ್ತಿದೆ. ಇದು ವಿದ್ಯಾರ್ಥಿಗಳು ನೇರವಾಗಿ ಕೆಲಸ ಪಡೆಯಲು ನೆರವಾಗುತ್ತದೆ. ಕಾಲೇಜಿನ ಮೂಲಕವೊಂದೇ ಅಲ್ಲ ಕಂಪನಿ ನೇರವಾಗಿಯೂ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ ಎಂದು ಸಂಜಯ್ ಹೇಳಿದ್ದಾರೆ.    

short by Pawan / more at Kannadadunia

Comments