Skip to main content


ನಿರಾಸೆ ಕಂಡ ರಾಯಲ್‌ ಚಾಲೆಂಜರ್ಸ್ ತಂಡ

ನಾಯಕ ವಿರಾಟ್ ಕೊಹ್ಲಿ (92; 62 ಎ, 4 ಸಿ, 7 ಬೌಂ) ಅವರ ಏಕಾಂಗಿ ಹೋರಾಟ ವ್ಯರ್ಥವಾಯಿತು. ಮುಂಬೈ ಇಂಡಿಯನ್ಸ್ ಬೌಲರ್‌ಗಳ ಕರಾರುವಾಕ್ ದಾಳಿಗೆ ನಲುಗಿದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್‌ನಲ್ಲಿ ನಿರಂತರ ಎರಡನೇ ಸೋಲು ಕಂಡಿತು. ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ವಿರಾಟ್ ಪಡೆಯನ್ನು ಮುಂಬೈ ಇಂಡಿಯನ್ಸ್‌ 46 ರನ್‌ಗಳಿಂದ ಮಣಿಸಿತು. 214 ರನ್‌ಗಳ ಗುರಿ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್‌ ಆರು ಬ್ಯಾಟ್ಸ್‌ಮನ್‌ಗಳು ಎರಡಂಕಿ ದಾಟದೆ ಔಟಾದರೆ ಮೂವರು 20 ರನ್‌ ಗಳಿಸಲಾಗದೆ ಮರಳಿದರು. ಟಾಸ್‌ ಗೆದ್ದ ರಾಯಲ್‌ ಚಾಲೆಂಜರ್ಸ್‌, ಎದುರಾಳಿಗಳನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಆರಂಭದಲ್ಲಿ ಆಘಾತ ಅನುಭವಿಸಿದರೂ ನಾಯಕ ರೋಹಿತ್ ಶರ್ಮಾ ಮತ್ತು ಎವಿನ್ ಲ್ಯೂವಿಸ್ ಅವರ ಅಮೋಘ ಜೊತೆಯಾಟದ ಬಲದಿಂದ ಮುಂಬೈ ಇಂಡಿಯನ್ಸ್ 213 ರನ್‌ ಕಲೆ ಹಾಕಿತು. 

short by Prajwal / read more at Prajavani

Comments