Skip to main content


ಕಾಲಿವುಡ್ ನಲ್ಲಿ ಅರಳಲಿದೆ ಕನ್ನಡದ "ಕೆಂಡಸಂಪಿಗೆ"

ಕಳೆದ ವಾರದಲ್ಲಿ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಸಿನಿಮಾ ನೋಡಿ ಮಾನ್ವಿತಾ ಅಭಿನಯವನ್ನ ಮೆಚ್ಚಿಕೊಂಡಿದ್ದರು. ಅದಷ್ಟೇ ಅಲ್ಲದೆ ಮುಂನ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಲು ಅವಕಾಶ ನೀಡಿ ಎರಡು ಸಾವಿರದ ನೋಟಿನ ಮೇಲೆ ಸಹಿ ಹಾಕಿ ಮಾನ್ವಿತಾ ಅವರಿಗೆ ಕೊಟ್ಟಿದ್ದರು. ಈ ಸುದ್ದಿ ಇನ್ನು ಚಾಲ್ತಿಯಲ್ಲಿರುವಾಗಲೇ ಮಾನ್ವಿತಾ ಅಭಿಮಾನಿಗಳಿಗೆ ಸಿಹಿಯಾದ ಸುದ್ದಿ ಸಿಕ್ಕಿದೆ. ಟಗರು ಪುಟ್ಟಿ ಇನ್ನು ಕೆಲವೇ ದಿನಗಳಲ್ಲಿ ಕಾಲಿವುಡ್ ಅಂಗಳಕ್ಕೆ ಕಾಲಿಡುತ್ತಿದ್ದಾರೆ. ಈಗಾಗಲೇ ತಮಿಳು ಚಿತ್ರರಂಗದಿಂದ ಮಾನ್ವಿತಾ ಅವರಿಗೆ ಆಫರ್ ಗಳು ಬರಲಾರಂಭಿಸಿದ್ದು ಕಾಲಿವುಡ್ ಮಂದಿ ಸಂಭ್ರಮದಿಂದ ಬರಮಾಡಿಕೊಳ್ಳುತ್ತಿದ್ದಾರೆ.

short by Pawan / read more at 60secondsnow

Comments