Skip to main content


ಇನ್ನೋವಾ, ಓಮ್ನಿ ಮುಖಾಮುಖಿ ಡಿಕ್ಕಿ – ತಾಯಿ-ಮಗ ದುರ್ಮರಣ, ಆರು ಮಂದಿ ಗಂಭೀರ

ಇನ್ನೋವಾ ಮತ್ತು ಓಮ್ನಿ ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ತಾಯಿ-ಮಗ ಇಬ್ಬರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆಯ ನೆಲ್ಲಿಕಾರು ಎಂಬಲ್ಲಿ ನಡೆದಿದೆ. ತೀರ್ಥಹಳ್ಳಿ ಮೂಲದ ಸೋಮಶೇಖರ್(45) ಹಾಗೂ ತಾಯಿ ರತ್ನಮ್ಮ(70) ಮೃತ ದುರ್ದೈವಿಗಳು. ಪ್ರವಾಸ ನಿಮಿತ್ತ ಓಮ್ನಿ ಕಾರಿನಲ್ಲಿ ಕುಟುಂಬದವರು ತೀರ್ಥಹಳ್ಳಿಯಿಂದ ಮಂಗಳೂರು ಕಡೆಗೆ ಬರುತ್ತಿತ್ತು. ಇವರ ವಿರುದ್ಧ ದಿಕ್ಕಿನಿಂದ ಇನ್ನೋವಾ ಬರುತ್ತಿತ್ತು. ಈ ವೇಳೆ ಮೂಡಬಿದ್ರೆಯ ನೆಲ್ಲಿಕಾರು ಬಳಿ ವೇಗವಾಗಿ ಬಂದು ಎರಡು ಕಾರು ಮುಖಾಮುಖಿ ಡಿಕ್ಕಿ ಹೊಡೆದಿದೆ. ಪರಿಣಾಮ ತಾಯಿ ಮಗ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.      

short by NP / read more at Public TV

Comments