Skip to main content


ಭಾರತ ವಿಶ್ವಕಪ್ ಗೆದ್ದರೆ ವಿರಾಟ್ ಕೊಹ್ಲಿ ಆಕ್ಸ್ಫರ್ಡ್ ಬೀದಿಗಳಲ್ಲಿ ಶರ್ಟ್ ಬಿಚ್ಚಿ ಓಡುತ್ತಾರೆ: ಸೌರವ್ ಗಂಗೂಲಿ

ಟೀಂ ಇಂಡಿಯಾವೇನಾದರೂ 2019ರ ವಿಶ್ವಕಪ್ ಕಪ್ ಗೆದ್ದರೆ ನಾಯಕ ವಿರಾಟ್ ಕೊಹ್ಲಿ ತಮ್ಮ ಶರ್ಟ್ ಬಿಚ್ಚಿ ಆಕ್ಸ್ಫರ್ಡ್ ಬೀದಿಗಳಲ್ಲಿ ಓಡಾಡುತ್ತಾರೇನೋ ಎಂದು ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ. 16 ವರ್ಷಗಳ ಹಿಂದೆ ಕ್ರಿಕೆಟ್ ಕಾಶಿ ಇಂಗ್ಲೆಂಡ್ ನಲ್ಲಿ ನಾಟ್ ವೆಸ್ಟ್ ಸರಣಿ ಗೆದ್ದ ಖುಷಿಯಲ್ಲಿ ಅಂದು ನಾಯಕರಾಗಿದ್ದ ಸೌರವ್ ಗಂಗೂಲಿ ಅವರು ಖುಷಿಯ ಭರದಲ್ಲಿ ಪೆವಿಲಿಯನ್ ನಲ್ಲಿ ಟೀ ಶರ್ಟ್ ಬಿಚ್ಚಿ ಸಂಭ್ರಮಿಸಿದ್ದರು. ಇದನ್ನು ಮೆಲಕು ಹಾಕಿದ ಸೌರವ್ ಗಂಗೂಲಿ ಅವರು ಒಂದು ವೇಳೆ 2019ರ ವಿಶ್ವಕಪ್ ಏನಾದರೂ ಭಾರತ ಗೆದ್ದರೆ ಖುಷಿಗೆ ವಿರಾಟ್ ಕೊಹ್ಲಿ ಅವರು ಶರ್ಟ್ ಬಿಚ್ಚಿ ಆಕ್ಸ್ಫರ್ಡ್ ಬೀದಿಗಳಲ್ಲಿ ಸುತ್ತಾಡುತ್ತಾರೇನೋ ಎಂದು ಹೇಳಿದ್ದಾರೆ.   
  
short by Pawan / read more at Kannada Prabha