Skip to main content


ಕಾವೇರಿ : ವಿರೋಧಿಗಳು ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟ ಪ್ರಕಾಶ್ ರೈ..!

ಇತ್ತೀಚಿನ ಕೆಲ ದಿನಗಳಿಂದ ಕರ್ನಾಟಕ ಮತ್ತು ತಮಿಳುನಾಡಿನ ಮಧ್ಯೆ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಮತ್ತೆ ಕೋಲಾಹಲ ಎದ್ದಿದೆ. ನಟ ರಜನಿಕಾಂತ್ ಅವರ ಹೇಳಿಕೆಯಿಂದ ಇದೀಗ ತಮಿಳುನಾಡಿನಲ್ಲಿ ಭಾರಿ ಪ್ರತಿಭಟನೆಗಳು ನಡೆಯುತ್ತಿದ್ದು ಕರ್ನಾಟಕದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಈ ಬೆನ್ನಲ್ಲೇ ಇದೀಗ ಬಾಗಲಕೋಟೆಯಲ್ಲಿ ಮಾತನಾಡಿದ ಪ್ರಕಾಶ್ ರೈ ಅವರು ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜಕೀಯ ಮಾಡುವವರಿಗೆ ಸಖತ್ ಟಾಂಗ್ ಕೊಟ್ಟಿದ್ದಾರೆ. ಎಲ್ಲರೂ ಕಾವೇರಿ ನದಿ ನೀರು ನಮಗೆ ಬೇಕು ನಮಗೆ ಬೇಕು ಅಂತ ಮಾತನ್ನು ಮಾತ್ರ ಆಡ್ತಾರೆ ಭಾಷಣಗಳನ್ನು ಮಾಡ್ತಾರೆ ಆದರೆ ವಾಸ್ತವ ಏನು ಅಂತ ಯಾರಿಗೂ ಗೊತ್ತಿಲ್ಲ ವಾಸ್ತವ ಏನು ಎಂಬುದನ್ನು ಅರ್ಥ ಮಾಡಿಸಲು ಯಾರೂ ಮುಂದೆ ಬರುತ್ತಿಲ್ಲ ಈ ಸಲುವಾಗಿ ನಾನು ನನ್ನ ಜಸ್ಟ್ ಆಸ್ಕಿಂಗ್ ಫೌಂಡೇಶನ್ ವತಿಯಿಂದ ತಜ್ಞರ ಜೊತೆ ಕೈಜೋಡಿಸಿ ವಾಸ್ತವದ ಬಗ್ಗೆ ಡಾಕ್ಯುಮೆಂಟರಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. 
    
short by Pawan.