Skip to main content


ಚಿರಂಜೀವಿ ಸರ್ಜಾ-ಮೇಘನಾ ರಾಜ್ ಕಲ್ಯಾಣಕ್ಕೆ ಸಿದ್ದತೆ

ಸ್ಯಾಂಡಲ್ ವುಡ್ ನಲ್ಲಿ ಮದುವೆಯ ಶುಭ ಕಾರ್ಯಕ್ಕೆ ಮಹೂರ್ತ ಫಿಕ್ಸ್ ಆಗಿದೆ. ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನರಾಜ್ ಮದುವೆ ಸಮಾರಂಭಕ್ಕೆ ಭರದ ಸಿದ್ದತೆಗಳು ನಡೆಯುತ್ತಿದ್ದು ಈಗಾಗಲೇ ಎರಡು ಕುಟುಂಬದವರು ಮದುವೆಯ ಆಮಂತ್ರಣ ಪತ್ರಿಕೆಯನ್ನು ಹಂಚುವಲ್ಲಿ ಬ್ಯುಸಿ ಆಗಿದ್ದಾರೆ. ಅಕ್ಟೋಬರ್ 22 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಮೇ 2 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈಗಾಗಲೇ ಕೇರಳದ ಚಿತ್ರರಂಗದ ಗಣ್ಯರು ಹಾಗೂ ಸ್ನೇಹಿತರಿಗೆ ಮೇಘನರಾಜ್ ಮದುವೆ ಆಮಂತ್ರಣವನ್ನ ನೀಡಿದ್ದು ಕನ್ನಡ ಸಿನಿಮಾರಂಗದ ಸ್ನೇಹಿತರಿಗೆ ಪತ್ರಿಕೆ ನೀಡಲು ಆರಂಭಿಸಿದ್ದಾರೆ.

short by: Nithin / read more at 60secondsnow


Comments