Skip to main content


ಅಚ್ಚರಿಯಾದ್ರೂ ನಿಜ! ಫೇಸ್ ಬುಕ್ ಕಾರಣಕ್ಕೆ ಮುರಿದು ಬಿದ್ದಿದೆ ಮದುವೆ

ಮದುವೆಗೆ ಇನ್ನು ಎರಡು ದಿನವಿರುವಾಗ ಫೇಸ್ ಬುಕ್ ನಲ್ಲಿ ವಧುವಿನ ಚಿತ್ರವೊಂದು ವರನ ಕುಟುಂಬದವರ ಕಣ್ಣಿಗೆ ಬಿದ್ದಿದೆ. ಆ ಫೋಟೋದಲ್ಲಿ ವಧು ಹಣೆಗೆ ಸಿಂಧೂರವಿಟ್ಟುಕೊಂಡಿದ್ದು, ಮದುವೆಯಾದವರು ಮಾತ್ರ ಸಿಂಧೂರವಿಡುವ ಕಾರಣ ಆಕೆಗೆ ಈಗಾಗಲೇ ಮದುವೆಯಾಗಿದೆ ಎಂಬ ತೀರ್ಮಾನಕ್ಕೆ ಬಂದಿದೆ ವರನ ಕುಟುಂಬ. ಇದೇ ಕಾರಣ ಹೇಳಿ ಮದುವೆಯನ್ನು ರದ್ದು ಮಾಡಿದ್ದು, ಇದರಿಂದ ಮದುವೆಗೆ ಸಕಲ ಸಿದ್ದತೆ ಮಾಡಿಕೊಂಡಿದ್ದ ವಧುವಿನ ಕುಟುಂಬ ಕಂಗಾಲಾಗಿದೆ. ನಿಗದಿಯಾಗಿದ್ದ ಮದುವೆಯನ್ನು ಹಾಳು ಮಾಡಲೆಂದೇ ಯಾರೋ ಫೋಟೋಶಾಪ್ ಮಾಡಿರುವ ಈ ಫೋಟೋವನ್ನು ಹಾಕಿದ್ದಾರೆಂದು ಹೇಳುತ್ತಿದ್ದರೂ ವರನ ಕುಟುಂಬದವರು ಮಾತ್ರ ತಮ್ಮ ನಿಲುವಿಗೆ ಅಂಟಿಕೊಂಡಿದ್ದಾರೆನ್ನಲಾಗಿದೆ. ಇದೀಗ ಈ ವಿಚಾರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಏನಾಗುತ್ತದೆಂಬುದನ್ನು ಕಾದು ನೋಡಬೇಕಿದೆ.  

short by Pawan / more at Kannadadunia

Comments