Skip to main content


ಪೈಲ್ವಾನ್ ಆಗೋಕೆ ಮಗನೊಂದಿಗೆ ದುನಿಯಾ ವಿಜಯ್ ಪ್ರಾಕ್ಟೀಸ್

ದುನಿಯಾ ವಿಜಯ್ ಅವರ ಮುಂದಿನ ಸಿನಿಮಾ 'ಕುಸ್ತಿ' ಚಿತ್ರದಲ್ಲಿ ದುನಿಯಾ ವಿಜಯ್ ಕುಸ್ತಿಪಟುವಾಗಿ ನಟಿಸುತ್ತಿದ್ದು, ಚಿತ್ರದ ತಯಾರಿ ಆರಂಭವಾಗಿದೆ. ದುನಿಯಾ ವಿಜಯ್ ಈಗ ಕುಸ್ತಿಯ ಪಟ್ಟುಗಳನ್ನು ಪ್ರಾಕ್ಟೀಸ್ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ, ಕಾರ್ತಿಕ್ ಕಾಟೆ, ಅಪ್ಪಾಸಿ ತೇರದಾಳ ಹಾಗೂ ಬೀರೇಶ್ ಎಂಬ ರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳು ದುನಿಯಾ ವಿಜಯ್ ಗೆ ತರಬೇತಿ ಕೊಡುತ್ತಿದ್ದಾರೆ. ದುನಿಯಾ ವಿಜಯ್ ಬ್ಯಾನರ್ ನಲ್ಲೇ ಮೂಡಿ ಬಂದಿರುವ ಈ ಚಿತ್ರವನ್ನು ನವ ನಿರ್ದೇಶಕ ಅನಿಲ್ ನಿರ್ದೇಶನ ಮಾಡುತ್ತಿದ್ದಾರೆ. ವಿಜಯ್ ಮಗ ಸಾಮ್ರಾಟ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.    

short by Pawan / read more at Kannada News Now

Comments