Skip to main content


ಬಾಕ್ಸಿಂಗ್: ಮೇರಿ ಕೋಮ್ ಫೈನಲ್‌ಗೆ

ಐದು ಬಾರಿಯ ವಿಶ್ವ ಚಾಂಪಿಯನ್ ಹಾಗೂ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿರುವ ಮೇರಿ ಕೋಮ್ ಮಹಿಳೆಯರ 45-48ಕೆ.ಜಿ. ವಿಭಾಗದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ನಿರೀಕ್ಷೆಯಂತೆಯೇ ಫೈನಲ್‌ಗೆ ತಲುಪಿದ್ದಾರೆ. ಚೊಚ್ಚಲ ಕಾಮನ್‌ವೆಲ್ತ್ ಗೇಮ್ಸ್ ಆಡುತ್ತಿರುವ 35ರ ಹರೆಯದ ಮೇರಿ ಕೋಮ್ ಬುಧವಾರ ನಡೆದ ಸೆಮಿಫೈನಲ್‌ನಲ್ಲಿ ಶ್ರೀಲಂಕಾದ ಅನುಷಾ ದಿಲ್ರುಕ್ಷಿ ಅವರನ್ನು 5-0 ಅಂತರದಿಂದ ಮಣಿಸಿದ್ದಾರೆ.

ಪುರುಷರ ಬಾಕ್ಸಿಂಗ್‌ನಲ್ಲಿ ಗೌರವ್ ಸೋಳಂಕಿ, ವಿಕಾಸ್ ಕ್ರಿಶನ್ ಹಾಗೂ ಮನೀಶ್ ಕೌಶಿಕ್ ಸೆಮಿಫೈನಲ್‌ಗೆ ತಲುಪಿದ್ದಾರೆ. ಇದೇ ವೇಳೆ, 2014ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿರುವ ಸರಿತಾ ದೇವಿ ಮಹಿಳೆಯರ 65 ಕೆಜಿ ತೂಕ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಆಸ್ಟ್ರೇಲಿಯದ ಅಂಜಾ ಸ್ಟ್ರೀಡ್ಸ್‌ಮನ್ ವಿರುದ್ಧ 0-5 ಅಂತರದಿಂದ ಸೋಲುವುದರೊಂದಿಗೆ ಗೇಮ್ಸ್‌ನಿಂದ ನಿರ್ಗಮಿಸಿದರು.   

short by Prajwal / read more at Varthabharathi

Comments