Skip to main content


ಚಾಮುಂಡೇಶ್ವರಿ ಜೊತೆಗೆ ಬಾಗಲಕೋಟೆಯ ಬದಾಮಿಯಿಂದಲೂ ಸ್ಪರ್ಧಿಸಲು ಸಿಎಂ ಸಜ್ಜಾಗಿದ್ದಾರೆ

ಈಗಾಗಲೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆರು ದಿನಗಳ ಕಾಲ ಸತತ ಪ್ರಚಾರ ನಡೆಸಿದ್ದಾರೆ. ವಿಪಕ್ಷ ನಾಯಕರ ಸವಾಲು ಕ್ಷೇತ್ರದಲ್ಲಿ ತುಸು ಹೆಚ್ಚೇ ಇದ್ದಹಾಗೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸೋಕೆ ತಯಾರಿ ನಡೆಸಿದ್ದಾರೆ. ಈ ವಿಚಾರವನ್ನು ಸ್ವತಃ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರೇ ಬಯಲು ಮಾಡಿದ್ದಾರೆ. ನಮ್ಮಲ್ಲಿ ಸಿಎಂ ಹೊರತುಪಡಿಸಿ ಬೇರೆ ಯಾರು 2 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬಯಸಿಲ್ಲ ಎಂದು ಹೇಳುವ ಮೂಲಕ ವಿಚಾರ ಬಹಿರಂಗವಾಗಿದೆ.      

short by NP / read more at Public TV

Comments