Skip to main content


ರಾಜರಥ ಸಿನಿಮಾ ವಿವಾದದ ಕುರಿತಾಗಿ ಅಚ್ಚರಿಯ ಹೇಳಿಕೆ ನೀಡಿದ ರ‍್ಯಾಪಿಡ್ ರಶ್ಮಿ

ಇತ್ತೀಚೆಗೆ ರಾಜರಥ ಸಿನಿಮಾದ ವಿವಾದವೊಂದು ಅಂತ್ಯವಾಗಿದೆ. ರ‍್ಯಾಪಿಡ್ ರಶ್ಮಿ ನಡೆಸಿದ ಸಂದರ್ಶನದಲ್ಲಿ ಅನೂಪ್ ಭಂಡಾರಿ, ತಮ್ಮ `ರಾಜರಥ’ ಸಿನಿಮಾ ನೋಡದೇ ಇರುವರು ಕಚಡಾ ನನ್ಮಕ್ಕಳು ಅಂತಾ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ರು. ಇದರ ಜೊತೆಗೆ ಅವಂತಿಕಾ ಶೆಟ್ಟಿ ಮತ್ತು ನಿರೂಪ್ ಭಂಡಾರಿ ಸಹ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ಕಾರ್ಯಕ್ರಮ ನಿರೂಪಕಿ ರ್ಯಾಪಿಡ್ ರಶ್ಮಿ ರಾಜರಥ ಸಿನಿಮಾದ ಬಗ್ಗೆ ತಮ್ಮ ಫೇಸ್‍ಬುಕ್ ಪೇಜ್ ನಲ್ಲಿ ಪೂರ್ಣ ವಿಡಿಯೋವನ್ನು ಅಪ್ಲೋಡ್ ಮಾಡಿಕೊಂಡು ಸ್ಪಷ್ಟನೆ ನೀಡಿದ್ದಾರೆ.

short by Pawan / read more at Public Tv

Comments