Skip to main content


ಸ್ಯಾಂಡಲ್ ವುಡ್ ನಲ್ಲಿ ಟಗರು ಸೂರಿ ಬಗ್ಗೆ ಹರಿದಾಡ್ತಾ ಇರೋ ವಿಷ್ಯಾ ಎನ್ ಗೊತ್ತಾ!?

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಟಗರುಗೆ ಫಿದಾ ಆಗಿದ್ದು ಗೊತ್ತೇ ಇದೆ. ಅದರ ಮುಂದುವರಿದ ಭಾಗವಾಗಿ ಸೂರಿ ತೆಲುಗು ಚಿತ್ರವೊಂದನ್ನು ನಿರ್ದೇಶಿಸುತ್ತಾರೆ ಎನ್ನುವ ಸುದ್ದಿಯೂ ದಟ್ಟವಾಗಿದೆ. ಆದ್ರೆ ಗಾಂಧಿನಗರದಲ್ಲಿ ಬೇರೆ ವಿಷ್ಯ ಹರಿದಾಡ್ತಿದೆ. ಸೂರಿ ವರ್ಮಾಗಾಗಿ ಒಂದು ತೆಲುಗು ಚಿತ್ರ ನಿರ್ದೇಶಿಸೋದು ಗ್ಯಾರಂಟಿಯಾಗಿದೆ ಎಂದು ಎಲ್ಲೆಡೆ ಭಾರಿ ಸದ್ದು ಮಾಡ್ತಿದೆ. ಆದ್ರೆ ಸೂರಿ ಒಲವು ಬೇರೆಯೇ ಇದೆಯಂತೆ. ವರ್ಮಾಗಾಗಿ ಚಿತ್ರ ಡೈರೆಕ್ಟ್ ಮಾಡೋ ಆಸೆ ಸೂರಿಗೂ ಇದೆ, ಆದ್ರೆ ಅದು ತೆಲುಗಿನಲ್ಲಿ ಅಲ್ಲ.ಸೂರಿ ಸದ್ಯ ಬಾಲಿವುಡ್ ಕಡೆ ದೃಷ್ಟಿ ನೆಟ್ಟಿದ್ದಾರಂತೆ. ತನ್ನ ಮುಂದಿನ ಜಂಪ್ ತೆಲುಗಿಗಲ್ಲ, ಬಾಲಿವುಡ್‌‌ಗೆ ಆಗ್ಬೇಕು ಎನ್ನುವ ಬಯಕೆ ಈ ಪ್ರತಿಭಾವಂತ ನಿರ್ದೇಶಕನದ್ದು.ತಾನು ಹಿಂದಿಯಲ್ಲಿ ಒಂದು ಚಿತ್ರ ಮಾಡೋ ಬಯಕೆ ಬಿಚ್ಚಿಟ್ಟಿದ್ದಾರಂತೆ.

short by: Nithin / read more at EenaduIndia

Comments