Skip to main content


ಲೈಂಗಿಕ ಕಿರುಕುಳ ನೀಡಿದ ಟ್ರಾಫಿಕ್ ಪೊಲೀಸ್ ಕೆನ್ನೆಗೆ ಭಾರಿಸಿದ ಯುವತಿ

ಟ್ರಾಫಿಕ್ ಪೊಲೀಸ್ ಒಬ್ಬ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಕಾರಣ ಆಕೆಯಿಂದ ಹೊಡೆತ ತಿಂದಿರುವ ಘಟನೆ ಹರಿಯಾಣದ ರೋಹ್ಟಕ್ ಪ್ರದೇಶದಲ್ಲಿ ನಡೆದಿದೆ. ಕರಾಟೆ ತರಬೇತಿ ತರಗತಿಯಿಂದ ಆಟೋದಲ್ಲಿ ಮನೆಗೆ ಹಿಂದಿರುವ ವೇಳೆ ಘಟನೆ ನಡೆದಿದ್ದು, ಪೊಲೀಸ್ ಆಕೆಯ ಫೋನ್ ನಂಬರ್ ಕೇಳಿ ಲೈಂಗಿಕ ಕಿರುಕುಳ ನೀಡಿದ್ದ ಎಂದು ಮಾಧ್ಯಮಮೊಂದು ವರದಿ ಮಾಡಿದೆ. ಅಂದಹಾಗೇ ಯುವತಿ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಆಗಿದ್ದು, ಹಲವು ಟೂರ್ನಿಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಘಟನೆ ಬಳಿಕ ಆರೋಪಿ ಅಧಿಕಾರಿಯ ವಿರುದ್ಧ ದೂರು ದಾಖಲಿಸಲಾಗಿದೆ.     

short by Pawan / read more at Public Tv