Skip to main content


ಬಡತನದಿಂದ ಬೆಳೆದು ಬಂದು ಅಪ್ರತಿಮ ಕಲಾವಿದ ಅರವಿಂದ ಬೋಳಾರ್

ಮಂಗಳೂರು ಸಮೀಪದ ಬಜಾಲ್‌ನ ಕೃಷ್ಣಪ್ಪ ಮತ್ತು ಸುಂದರಿ ದಂಪತಿಯ ಪುತ್ರನಾದ ಅರವಿಂದ್ ಬೋಳಾರ್ ರಂಗಭೂಮಿಯಲ್ಲಿ ಉತ್ತಮ ಹಾಸ್ಯ ಕಲಾವಿದ. ಕಲಿತದ್ದು ಕೇವಲ ಆರನೇ ಕ್ಲಾಸು. ಆದರೆ ಕಲೆಯಲ್ಲಿ ವಿದ್ಯಾವಂತರು. ಹುಟ್ಟಿ ಬೆಳೆದದ್ದು ಬಡತನದಲ್ಲಿ. ಎಳೆಯ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ಈ ಕಲಾವಿದನಿಗೆ ತಾಯಿಯೇ ಆಸರೆಯಾಗಿದ್ದರು. ಚಿಕ್ಕಂದಿನಿಂದಲೇ ಕಲಾಮಾತೆ ಶಾರದೆಯ ಮಡಿಲಿನಲ್ಲಿ ಬೆಳೆದ ಇವರು ಇಂದು ಅದ್ಭುತ ಕಲಾವಿದ. ಯಕ್ಷಗಾನ ಇವರ ಆಸಕ್ತಿಯ ಕ್ಷೇತ್ರ. 10 ಕ್ಕಿಂತಲೂ ಮಿಕ್ಕಿ ಪ್ರಸಂಗಗಳಲ್ಲಿ ಅಭಿನಯಿಸಿರುವ ಇವರು ಮೊದಲು ಗೆಜ್ಜೆ ಕಟ್ಟಿ ರಂಗಸ್ಥಳದಲ್ಲಿ ಕುಣಿದಿದ್ದು ಕೃಷ್ಣಲೀಲೆ ಎಂಬ ಯಕ್ಷಗಾನಕ್ಕೆ. ಎಳೆಯ ವಯಸ್ಸಿನಲ್ಲಿ ಗುರುಗಳಾದ ರಾಘವ ಕೆ ಉಳ್ಳಾಲ್ ಅವರ ನೇತೃತ್ವದಲ್ಲಿ ರಂಗ ಪ್ರವೇಶಿಸಿದ ಇವರು ಮೊದಲು ಬಣ್ಣ ಹಚ್ಚಿದ್ದು ಬ್ರಹ್ಮನ ಬರವು ಎಂಬ ನಾಟಕಕ್ಕೆ. ಮುಂದೆ ದೇವದಾಸ್ ಕಾಪಿಕಡ್ ಅವರ ಶಿಷ್ಯರಾಗಿ ಪಳಗಿದ ಇವರಿಗೆ ಅವಕಾಶಗಳು ಹೆಚ್ಚುತ್ತಲೇ ಹೋಯಿತು. ರಂಗಭೂಮಿಯಲ್ಲಿ ಸುಮಾರು 300 ಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿ 10,000 ಕ್ಕಿಂತಲೂ ಮಿಕ್ಕಿ ಪ್ರದರ್ಶನ ನೀಡಿರುವ ಇವರು ತುಳು ಮತ್ತು ಕನ್ನಡ ಸೇರಿದಂತೆ ಐತಿಹಾಸಿಕ, ಸಾಮಾಜಿಕ ಮತ್ತು ಜಾನಪದ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಇವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. 500 ಕ್ಕೂ ಹೆಚ್ಚು ಸನ್ಮಾನಗಳ ಜೊತೆಗೆ ಸಾಧನೆಯ ಸರದಾರ, ತುಳುವ ಮಾಣಿಕ್ಯ ಮುಂತಾದ ನಾಮ ಪುರಸ್ಕಾರಗಳು ಸಂದಿವೆ.        

short by NP / read more at Daijiworld247

Comments