Skip to main content


ರಣಬೀರ್ ಕಪೂರ್ ಮದುವೆಯ ಬಗ್ಗೆ ತಂದೆ ರಿಷಿ ಕಪೂರ್ ಹೇಳಿದ ಹೊಸ ವಿಚಾರವೇನು ಗೊತ್ತಾ...?

ಬಾಲಿವುಡ್ ನಟ ರಣಬೀರ್ ಕಪೂರ್ ಅವರ ಹೆಸರು ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್ ಹಾಗೂ ಇತ್ತಿಚೆಗೆ ಆಲಿಯಾ ಭಟ್ ಅವರ ಜೊತೆ ಕೇಳಿಬಂದಿತ್ತು. ಇವರು ಯಾರನ್ನು ಮದುವೆಯಾಗುತ್ತಾರೆ ಎಂಬ ಗೊಂದಲ ಕೂಡ ಅವರ ಅಭಿಮಾನಿಗಳಲ್ಲಿ ಮೂಡಿತ್ತು. ಆದರೆ ಇದೀಗ ರಿಷಿ ಕಪೂರ್ ಅವರು ತಮ್ಮ ಮಗ ರಣಬೀರ್ ಅವರ ಮದುವೆಯ ಬಗ್ಗೆ ಹೊಸ ವಿಚಾರವೊಂದನ್ನು ಹೊರಹಾಕಿದ್ದಾರೆ. ಈ ಬಗ್ಗೆ ಮಾತನಾಡಿದ ರಿಷಿ ಕಪೂರ್ ಅವರು,' 'ಒಬ್ಬ ತಂದೆಯಾಗಿ ರಣಬೀರ್‌ಗೆ ಒಂದು ಒಳ್ಳೆಯ ಜೀವನ ಕಟ್ಟಿಕೊಡಬೇಕು. ಅವನಿಗೆ ಬೇಗ ಮದುವೆಯಾಗಿ ನಾನು ತಾತನಾಗಬೇಕು. ಇನ್ನು ಪ್ರೀತಿ ಮಾಡಿ ಮದುವೆಯಾಗುವುದೆಲ್ಲವೂ ದೂರದ ಮಾತು. ಸಾಧ್ಯವಾದಷ್ಟು ಬೇಗ ರಣಬೀರ್ ಮದುವೆಯನ್ನು ಕಣ್ತುಂಬಿಕೊಳ್ಳುತ್ತೇನೆ. ಇದಕ್ಕಾಗಿ ಸಕಲ ಸಿದ್ಧತೆಯೂ ನಡೆಯುತ್ತಿದೆ' ಎಂದು ಹೇಳುವುದರ ಮೂಲಕ ರಣಬೀರ್ ಅವರ ಮದುವೆ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ.      

short by Prajwal / more at Dailyhunt

Comments