Skip to main content


ಕಾವೇರಿ ಪ್ರತಿಭಟನೆ: ವಾಟಾಳ್ ನಾಗರಾಜ್ ಹೇಳಿಕೆ ವಿರುದ್ಧ ರಜನಿಕಾಂತ್ ತಿರುಗೇಟು.

ಕಾವೇರಿ ನದಿ ನೀರು ಹಂಚಿಕೆ ವಿವಾದ ಸಂಬಂಧ ತಮಿಳುನಾಡಿನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಕೆಲವು ದಿನಗಳ ಹಿಂದೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮಾತನಾಡಿ ರಜನಿಕಾಂತ್ ಹಾಗೂ ಕಮಲ್ ಹಾಸನ್ ಸಿನಿಮಾಗಳನ್ನೂ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದರು. ಈಗ ಇದಕ್ಕೆ ರಜನಿಕಾಂತ್ ಪ್ರತಿಕ್ರಿಯೆ ನೀಡಿದ್ದಾರೆ. ರಂಜಕಾಂತ ”ಕರ್ನಾಟಕದಲ್ಲಿ ನನ್ನ ಚಿತ್ರಗಳನ್ನು ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಹೋರಾಟಗಾರರು ಹೇಳಿದ್ದಾರೆ. ನಾವೇನು ತಪ್ಪು ಮಾಡಿಲ್ಲ. ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಬಿಡುಗಡೆಗೆ ಸಂಕಷ್ಟ ಎದುರಾದರೇ ನಿರ್ಮಾಪಕರು ನೋಡಿಕೊಳ್ಳುತ್ತಾರೆ. ಅದನ್ನ ಮೀರಿ ಕಾನೂನು ಎಂಬುದು ಒಂದಿದೆ. ಕರ್ನಾಟಕ ಸರ್ಕಾರ ಖಂಡಿತವಾಗಿ ಭದ್ರತೆ ನೀಡುತ್ತಾರೆ ಎಂಬ ನಂಬಿಕೆ ನಮಗೆ ಇದೆ” ಎಂದು ಹೇಳಿದ್ದಾರೆ.        

short by Pawan / read more at Arali Katte

Comments