Skip to main content


"ಸರಿಗಮಪ" ಖ್ಯಾತಿಯ ಸುಹಾನ ಸೈಯದ್ ಸಿನಿಮಾ ಪ್ರಯಾಣ ಶುರು

ಜೀ ಕನ್ನಡ ಸರಿಗಮಪ ಕಾರ್ಯಕ್ರಮದ ಕಳೆದ ಸಂಚಿಕೆಯಲ್ಲಿ ಹಾಡಿದ್ದ ಬಹುತೇಕ ಗಾಯಕರಿಗೆ ಸಿನಿಮಾದಲ್ಲಿ ಹಾಡುವ ಅವಕಾಶ ಸಿಕ್ಕಿದೆ. ಈಗ ಗಾಯಕಿ ಸುಹಾನ ಸೈಯದ್ ಅವರಿಗೆ ಸಹ ಸಿನಿಮಾದಲ್ಲಿ ಹಾಡುವ ಚಾನ್ಸ್ ಸಿಕ್ಕಿದೆ. 'ಸ್ಟೇಟ್ ಮೆಂಟ್ 8/11' ಎನ್ನುವ ಹೊಸ ಸಿನಿಮಾದಲ್ಲಿ ಹಾಡುವ ಮೂಲಕ ಸುಹಾನ ತಮ್ಮ ಸಿನಿಮಾ ಜರ್ನಿ ಶುರು ಮಾಡಿದ್ದಾರೆ. 'ನರನಾಡಿ ನುಡಿಯುತ್ತೆ ಹಿಂದುಸ್ತಾನ್..' ಎಂಬ ಹಾಡಿಗೆ ಸುಹಾನ ಧ್ವನಿ ನೀಡಿದ್ದಾರೆ. 'ಸ್ಟೇಟ್ ಮೆಂಟ್ 8/11' ಚಿತ್ರದ ದೇಶಭಕ್ತಿ ಗೀತೆ ಇದಾಗಿದೆ. ಇದೊಂದು ಹೊಸಬರ ಸಿನಿಮಾವಾಗಿದ್ದು, ಹೇಮಂತ್ ಸಂಗೀತ ಹಾಡಿನಲ್ಲಿದೆ.   

short by Pawan / read more at 60secondsnow

Comments