Skip to main content


ತುಳು ನಾಟಕದ ನಾಯಕಿಯ ಮಾನಭಂಗಕ್ಕೆ ಯತ್ನ- ತಂಡದ ಸಂಚಾಲಕನ ಬಂಧನ

ಕೊಯಿಲ ನಿವಾಸಿ ಪುರಷೋತ್ತಮ ಪೂಜಾರಿ ಬಂಧಿತ ಆರೋಪಿ. ಆರೋಪಿ ಪುರುಷೋತ್ತಮ ಕೊಯಿಲ ನಾಟಕ ತಂಡವೊಂದರ, ಸಂಚಾಲಕನಾಗಿದ್ದು, ಯುವತಿ ಆ ತಂಡದ ಕಲಾವಿದೆಯಾಗಿದ್ದಳು. 2017 ರ ಆಗಸ್ಟ್ 25 ರಂದು ಉಡುಪಿಯಲ್ಲಿ ನಾಟಕ ಪ್ರದರ್ಶನ ಮುಗಿಸಿ ಬರುವ ವೇಳೆ ತಡರಾತ್ರಿಯಾಗಿದ್ದರಿಂದ ಸಹ ಕಲಾವಿದರ ಸಹಿತ ಪುರುಷೋತ್ತಮನ ಮನೆಯಲ್ಲಿ ವಾಸ್ತವ್ಯವಿದ್ದರು. ಇದನ್ನು ದುರುಪಯೋಗಪಡಿಸಿಕೊಂಡ ಆರೋಪಿ, ಪುರುಷೋತ್ತಮ ತನ್ನ ಮಾನಭಂಗಕ್ಕೆ ಯತ್ನಿಸಿದ್ದಾಗಿ, ನೊಂದ ಯುವತಿ ದೂರು ನೀಡಿದ ವಿವರದಲ್ಲಿ ತಿಳಿಸಿದ್ದಾರೆ. ಬಳಿಕವೂ ಪುಸಲಾಯಿಸಿ ಪಿಲಿಕುಳಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಅಶ್ಲೀಲವಾಗಿ ವಿಡಿಯೋ ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ. ಈ ವಿಚಾರ ಗಮನಕ್ಕೆ ಬಂದ ಕೂಡಲೇ ಆತನನ್ನು ವಿಚಾರಿಸಿದಾಗ ತನ್ನನ್ನು ವಿವಾಹವಾಗುವುದಾಗಿ ನಂಬಿಸಿದ್ದ , ಅಲ್ಲದೆ ವಿವಾಹದ ಆಮಂತ್ರಣ ಪ್ರತಿಯನ್ನು ಮುದ್ರಿಸಲಾಗಿತ್ತು ಎಂದು ದೂರಿನಲ್ಲಿ ಯುವತಿ ತಿಳಿಸಿದ್ದಾಳೆ.        

short by Pawan / more at Daijiworld

Comments