Skip to main content


ಪ್ರಧಾನಿ ನರೇಂದ್ರ ಮೋದಿಗೆ ರಕ್ತದಲ್ಲಿ ಪತ್ರ ಬರೆದ ವಿಜಯಪುರ ಯುವಕ..

ತಮ್ಮ ಪಟ್ಟಣಕ್ಕೆ ಸರ್ಕಾರಿ ಪ್ರೌಢ ಶಾಲೆ ಬೇಕು ಎಂದು ತನ್ನದೇ ರಕ್ತದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಯುವಕನೋರ್ವ ಪತ್ರ ಬರೆದಿದ್ದಾನೆ. ಪಟ್ಟಣದ ಸುತ್ತಮುತ್ತ ಸುಮಾರು 30 ಹಳ್ಳಿಗಳಿದ್ದು ಪಟ್ಟಣದಲ್ಲಿ ಸರ್ಕಾರಿ ಪ್ರೌಢ ಶಾಲೆ, ಕಾಲೇಜುಗಳು ಯಾವುದೂ ಇಲ್ಲದ ಕಾರಣ ಮೋದಿಗೆ ಪತ್ರ ಬರೆದಿದ್ದಾನೆ. ರಕ್ತದಲ್ಲಿ ಪತ್ರ ಬರೆದವರೆ ವಿಜಯಪುರದ ಮುದ್ದೇಬಿಹಾಳ ತಾಲೂಕಿನ ನಾಲತವಾಡ ನಿವಾಸಿ ವಿಜಯರಂಜನ ಜೋಶಿ. ತನ್ನ ಪಟ್ಟಣಕ್ಕೆ ಪ್ರೌಢಶಾಲೆ, ಕಾಲೇಜು ನಿರ್ಮಿಸುವಂತೆ ಶಿಕ್ಷಣ ಇಲಾಖೆಗೆ, ರಾಜ್ಯ ಸರ್ಕಾರಕ್ಕೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ.ಇದರಿಂದ ಬೇಸತ್ತ ಯುವಕ ರಾಜ್ಯ ಸರ್ಕಾರ ಸತ್ತು ಶವವಾಗಿದೆ ಹೇಳುವ ಮೂಲಕ ಎಂದು ಪ್ರಧಾನಿಗೆ ಪತ್ರ ಬರೆದು ಆಕ್ರೋಶ ಹೊರಹಾಕಿದ್ದಾನೆ.

Short by Pawan / read more at UK Suddi


Image Courtesy: UK Suddi

Comments