Skip to main content


ಮೋದಿ ಪ್ರಳಯಕ್ಕೆ ಬೆದರಿ ವಿರೋಧ ಪಕ್ಷಗಳೆಲ್ಲಾ ಪ್ರಾಣಿಗಳಂತೆ ಒಗ್ಗೂಡಿವೆ

ವಿರೋಧ ಪಕ್ಷಗಳೆಲ್ಲಾ ಒಂದಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿವೆ. ಪ್ರಳಯ ಬಂದಾಗ ಹಾವು, ಮುಂಗುಸಿ, ಬೆಕ್ಕು, ನಾಯಿ, ಚಿರತೆ ಮತ್ತು ಸಿಂಹಗಳೆಲ್ಲಾ ನೀರಿನ ಮಟ್ಟ ಹೆಚ್ಚಾಗುತ್ತಿದ್ದಂತೆ ಮರ ಹತ್ತಿ ರಕ್ಷಣೆ ಪಡೆಯುತ್ತವೆ ಎಂದು ವಿಪಕ್ಷಗಳನ್ನು ಅಮಿತ್ ಶಾ ಗೇಲಿ ಮಾಡಿದ್ದಾರೆ.ಬಿಜೆಪಿಯ 38ನೇ ಸಂಸ್ಥಾಪನಾ ದಿನದ ಅಂಗವಾಗಿ ಮುಂಬೈನಲ್ಲಿ ನಡೆದ ರ‍್ಯಾಲಿಯಲ್ಲಿ ಅಮಿತ್ ಶಾ ವಿರೋಧ ಪಕ್ಷಗಳ ವಿರುದ್ದ ಟೀಕಾ ಪ್ರಹಾರ ಮಾಡಿದ್ದಾರೆ. ಮೋದಿಯವರ ಅಲೆಗೆ ಬೆದರಿ ಬೇರೆ ಬೇರೆ ವಿಚಾರಧಾರೆಗಳ ಪಕ್ಷಗಳ ಎಲ್ಲವೂ ಒಂದಾಗಿವೆ ಎಂದು ತಾನು ಹೇಳಿರುವುದಾಗಿ ಅಮಿತ್ ಶಾ ಸ್ಪಷ್ಟನೆ ನೀಡಿದ್ದಾರೆ.    

short by NP / read more at Prajavani