Skip to main content


ಡಿವಿಲಿಯರ್ಸ್‌ ಮಿಂಚು; ಆರ್‌ಸಿಬಿಗೆ ಜಯ

ಉದ್ಯಾನನಗರಿಯ ಕ್ರಿಕೆಟ್‌ಪ್ರೇಮಿಗಳಿಗೆ ಶುಕ್ರವಾರ ನಿರಾಶೆಯಾಗಲಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ  ವಿರಾಟ್ ಕೊಹ್ಲಿ ಬಳಗವು ಕಿಂಗ್ಸ್‌  ಇಲೆವನ್ ಪಂಜಾಬ್ ತಂಡದ ಎದುರು 4 ವಿಕೆಟ್‌ಗಳಿಂದ ಗೆದ್ದಾಗ ಪ್ರೇಕ್ಷಕರ ಸಂಭ್ರಮ ಮುಗಿಲು ಮುಟ್ಟಿತು. ಹೋದ ವರ್ಷ ಇಲ್ಲಿ ನಡೆದಿದ್ದ ಏಳು ಪಂದ್ಯಗಳ ಪೈಕಿ ಐದರಲ್ಲಿ ಆರ್‌ಸಿಬಿಯು ಸೋತಿತ್ತು. ಈ ಬಾರಿಯ ಟೂರ್ನಿಯ ಮೊದಲ ಪಂದ್ಯವು ಕೋಲ್ಕತ್ತದಲ್ಲಿ ನಡೆದಿದ್ದಾಗಲೂ ಆರ್‌ಸಿಬಿ ಪರಾಭವಗೊಂಡಿತ್ತು. ಆದರೆ ಈ ಬಾರಿ ಉಮೇಶ್ ಯಾದವ್ (23ಕ್ಕೆ3) ಭೌಲಿಂಗ್ ಮತ್ತು ಎಬಿ ಡಿವಿಲಿಯರ್ (57; 40ಎ, 2ಬೌಂ, 4ಸಿ) ಅವರ ಅಬ್ಬರದ ಬ್ಯಾಟಿಂಗ್‌ನಿಂದ ಆರ್‌ಸಿಬಿ ಜಯಿಸಿತು. ಕೆ.ಎಲ್.ರಾಹುಲ್  (47; 30ಎ, 2ಬೌಂ, 4ಸಿ) ಮತ್ತು ಕರುಣ್ ನಾಯರ್ (29; 26ಎ, 3ಬೌಂ) ಅವರ 58 ರನ್‌ಗಳ ಜೊತೆಯಾಟದಿಂದ ಕಿಂಗ್ಸ್‌ ತಂಡವು 155 ರನ್‌ ಗಳಿಸಿತ್ತು. ಇದಕ್ಕುತ್ತರವಾಗಿ ಆರ್‌ಸಿಬಿಯು 19.3 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 159 ರನ್‌ ಗಳಿಸಿತು.              

short by Prajwal / read more at Prajavani

Comments