Skip to main content


ಕಾವೇರಿ ವಿವಾದ, ಸಿಎಸ್ ಕೆಗೆ ಐಪಿಎಲ್ ನಲ್ಲಿ ಕಪ್ಪು ಬಟ್ಟೆ ಧರಿಸಿ ಆಟವಾಡಿ ಎಂದ ರಜನಿಕಾಂತ್!

ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಆಗ್ರಹಿಸಿ ತಮಿಳುನಾಡಿನಲ್ಲಿ ನಡೆಯುತ್ತಿರುವ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದ್ದು, ಇಂದು ತಮಿಳು ಫಿಲ್ಮ್ ಇಂಡಸ್ಟ್ರಿ ಕರೆ ಕೊಟ್ಟಿರುವ ಪ್ರತಿಭಟನೆಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಕಮಲ್ ಹಾಸನ್ ಭಾಗಿಯಾಗಿದ್ದಾರೆ.ಈ ವೇಳೆ ಮಾತನಾಡಿದ ಸೂಪರ್ ಸ್ಟಾರ್ ರಜನಿಕಾಂತ್ ತಮಿಳುನಾಡು ಕಾವೇರಿ ನಿರ್ವಹಣಾ ಮಂಡಳಿಗಾಗಿ ಆಗ್ರಹಿಸುತ್ತಿದೆ. ಹೀಗಿದ್ದೂ, ರಾಜ್ಯದಲ್ಲಿ ಐಪಿಎಲ್ ಮ್ಯಾಚ್ ಗಳು ಆಯೋಜನೆಗೊಂಡಿವೆ. ಚೆನ್ನೈ ಸೂಪರ್ ಕಿಂಗ್ ಆಟಗಾರರು ನಮ್ಮ ಹೋರಾಟಕ್ಕೆ ಧ್ವನಿ ನೀಡಬೇಕಾಗಿದೆ. ನೀವು ಪ್ರತಿ ಮ್ಯಾಚ್ ನಲ್ಲೂ ಕಪ್ಪು ಬಟ್ಟೆ ಧರಿಸಿ ಆಟವಾಡಿ ಎಂದು ಸಲಹೆ ನೀಡಿದರು.

short by: Nithin / read more at Kannadanewsnow

Comments