Skip to main content


ಟಿವಿಯಲ್ಲಿ ಫೇಲ್ ಆದ ಮೇಲೆ ಟ್ವಿಟರ್ ನಲ್ಲಿ ಕಪಿಲ್ ಶರ್ಮಾ ಶೋ!

ಖ್ಯಾತ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಕಪಿಲ್ ಶರ್ಮಾ ಕಿರುತೆರೆಯಿಂದ ದೂರವಾದ ನಂತರ ಒಂದಿಲ್ಲೊಂದು ವಿವಾದದಿಂದ ಸುದ್ದಿಯಾಗುತ್ತಿದ್ದಾರೆ.
ಅದರಲ್ಲೂ  ಶುಕ್ರವಾರ ಕಪಿಲ್ ಶರ್ಮಾ ಅವರ ಕೆಲವು ಟ್ವೀಟ್ ಗಳು ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. ಟೀಕಾಕಾರರ ವಿರುದ್ಧ ತೀರಾ ಕೀಳುಮಟ್ಟದ ಭಾಷೆಯನ್ನು ಉಪಯೋಗಿಸಿದ್ದ ಕಪಿಲ್ ನಂತರ "ನನ್ನ ಖಾತೆಯು ಹ್ಯಾಕ್ ಆಗಿತ್ತು" ಎಂದು ಹೇಳಿದ್ದಾರೆ. ಅವರ ತಡರಾತ್ರಿಯ ಟ್ವೀಟ್‍ಗಳು ಈ ಹಿಂದೆ ಕೂಡಾ ವಿವಾದಕ್ಕೆ ಕಾರಣವಾಗಿದ್ದವು. ಶುಕ್ರವಾರ ಕಪಿಲ್ ಹಲವು ಬಾರಿ ಟ್ವೀಟ್ ಮಾಡಿದ್ದು, ಪ್ರತಿ ಟ್ವೀಟ್‍ಗಳಲ್ಲಿ ಆಕ್ಷೇಪಾರ್ಹ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ತಕ್ಷಣ ಅವುಗಳನ್ನು ಡಿಲೀಟ್ ಮಾಡಿದ್ದಾರೆ. 

short by Pawan / read more at Varthabharathi

Comments