Skip to main content


ಇನ್ನು ಖಾತಾ ಕೂಡ ಆನ್‌ಲೈನ್‌ನಲ್ಲೇ

ಸಿಲಿಕಾನ್‌ ಸಿಟಿಯಲ್ಲಿ ಒಂಧು ಸೈಟು ಖರೀದಿಸಿ, ಅದರಲ್ಲೊಂದು ಮನೆ ಕಟ್ಟುವುದೇ ಹರಸಾಹಸ. ಅದರಲ್ಲೂ ಕಟ್ಟಡಕ್ಕೆ ಸಂಬಂಧಿಸಿದ ನಕ್ಷೆ, ಖಾತಾ ಮತ್ತಿತರ ಅಗತ್ಯ ಪತ್ರಗಳಿಗಾಗಿ ಪಾಲಿಕೆ ಕಚೇರಿಗೆ ಅಲೆಯುವ ಗೋಳು ಅನುಭವಿಸಿದವರಿಗೇ ಗೊತ್ತು. ಪಾಲಿಕೆ ಕಚೇರಿಗೆ ಹೋದಾಗಲೆಲ್ಲಾ ಒಂದೊಂದು ದಾಖಲೆ ಮಿಸ್ಸಾಗಿದೆ ಎನ್ನುವ ಅಧಿಕಾರಿಗಳ ಮಾತು ಕೇಳಿ ನೀವು ರೋಸಿಹೋಗಿದ್ದರೆ, ನಿಮಗೊಂದು ಖೂಷಿ ಸುದ್ದಿಯಿದೆ. ಈಗಾಗಲೇ ಕಟ್ಟಡದ ನಕ್ಷೆ ಪಡೆಯುವ ಪ್ರಕ್ರಿಯೆಯನ್ನು ಆನ್‌ಲೈನ್‌ ವ್ಯವಸ್ಥೆಗೆ ಒಳಪಡಿಸಿರುವ ಬಿಬಿಎಂಪಿ, ಇದೀಗ ಕಟ್ಟಡದ ಖಾತಾ ಪಡೆಯುವಿಕೆಯನ್ನೂ ಆನ್‌ಲೈನ್‌ ವ್ಯವಸ್ತೆ ವ್ಯಾಪ್ತಿಗೆ ತರಲು ಮುಂದಾಗಿದೆ.                

short by NP / read more at Udayavani

Comments